Sunday, February 16, 2025
Homeಚಿಕ್ಕಮಗಳೂರುರಿಯಲ್ ಸ್ಟಾರ್  ಉಪೇಂದ್ರ ಅವರ 'ಯುಐ' ಚಿತ್ರದಲ್ಲಿ ಖಳ ನಾಯಕನಾಗಿ ಅಭಿನಯಿಸಿದ್ದಾರೆ ಪ್ರಮೋದ್ ಮಲ್ನಾಡ್

ರಿಯಲ್ ಸ್ಟಾರ್  ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳ ನಾಯಕನಾಗಿ ಅಭಿನಯಿಸಿದ್ದಾರೆ ಪ್ರಮೋದ್ ಮಲ್ನಾಡ್

spot_img
- Advertisement -
- Advertisement -

ಕೊಟ್ಟಿಗೆಹಾರ: ರಿಯಲ್ ಸ್ಟಾರ್  ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳ ನಾಯಕನಾಗಿ ಪ್ರಮೋದ್ ಮಲ್ನಾಡ್ ಅಭಿನಯಿಸಿದ್ದಾರೆ.

ಬಣಕಲ್ ನಿವಾಸಿ ಪ್ರಮೋದ್ ಮಲ್ನಾಡ್ ಅವರು  ಪ್ರಮೋದ್ ಮಲ್ನಾಡ್ ಬಣಕಲ್ ನಲ್ಲಿ ಹಲವು ವರ್ಷಗಳಿಂದ ಜಿಮ್ ನಡೆಸಿಕೊಂಡು ಬರುತ್ತಿದ್ದರು. ಸುಮಾರು ಏಳು ವರ್ಷಗಳಿಂದ ಚಿತ್ರರಂಗವನ್ನು ಸೇರಿ ನಟಿಸಬೇಕೆಂಬ ಮಹದಾಸೆ ಹೊತ್ತವರು. ಸವರ್ಣ ದೀರ್ಘ ಸಂಧಿ, ತ್ರಿಬಲ್ ರೈಡ್, ರಾಜು ಕನ್ನಡ ಮೀಡಿಯಂ, ಮುಂದೆ ಬರಲಿರುವ ನಾನು ಕರುಣಾಕರ ಚಿತ್ರದಲ್ಲೂ ಖಳನಟನಾಗಿ ನಟಿಸಿದ್ದಾರೆ.

ಸುಮಾರು 14 ದಾರಾವಾಹಿಗಳಲ್ಲೂ  ಖಳನಟನ ಪಾತ್ರದಲ್ಲಿ ನಟಿಸುತ್ತಾ ಬಂದಿದ್ದಾರೆ.  ಸೀತಾರಾಮ, ಮರಳಿ ಮನಸಾಗಿದೆ, ಪುಟ್ಮಲ್ಲಿ, ನೂರು ಜನ್ಮಕೂ ಧಾರಾವಾಹಿಯಲ್ಲಿ ಖಳ ನಟನಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೈ ಹೀರೋ ಕನ್ನಡ ಚಿತ್ರದಲ್ಲಿ ಮುಖ್ಯ ಖಳನಟನ ಪಾತ್ರದಲ್ಲಿ ನಟಿಸಿದ್ದಾರೆ.

ಮೂಲತಃ ಕೆಳಗೂರಿನ ಮೂಲೆಮನೆ ಗ್ರಾಮದವರಾದ ಇವರು ಚಿತ್ರರಂಗದವರ ನಂಟು ಹೊಂದಿ ಚಿತ್ರಗಳಲ್ಲಿ ನಟಿಸಿ ಉದಯೋನ್ಮುಖ ನಟನಾಗಬೇಕೆಂಬ ಹೆಬ್ಬಯಕೆ ಇವರದು.ಇವರ ನಟನೆಯ ಚಿತ್ರಗಳು ಯಶಸ್ವಿಯಾಗಿ ತೆರೆ ಕಂಡು ಉತ್ತಮ ಹೆಸರು ತಂದು ಕೊಡಲಿ ಎಂದು ಕಲಾಭಿಮಾನಿಗಳು ಹಾರೈಸಿದ್ದಾರೆ.

- Advertisement -
spot_img

Latest News

error: Content is protected !!