Monday, June 8, 2026
Homeಕರಾವಳಿಉಡುಪಿಬಿಜೆಪಿಗೆ ಹೋಗಿರುವ ಪ್ರಮೋದ್ ಮಧ್ವರಾಜ್ ಬೇಗ ಪಶ್ಚಾತ್ತಾಪ ಪಡುತ್ತಾರೆ : ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ....

ಬಿಜೆಪಿಗೆ ಹೋಗಿರುವ ಪ್ರಮೋದ್ ಮಧ್ವರಾಜ್ ಬೇಗ ಪಶ್ಚಾತ್ತಾಪ ಪಡುತ್ತಾರೆ : ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ

- Advertisement -
- Advertisement -

ಉಡುಪಿ: ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದು,‌ ಮುಂದಿನ ದಿನದಲ್ಲಿ ಪ್ರಮೋದ್ ಮಧ್ವರಾಜ್ ಪಶ್ಚಾತಾಪ ಪಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ‌

ಉಡುಪಿಯಲ್ಲಿ ಇಂದು ಮಾತನಾಡಿದ ಡಿ.ಕೆ. ಶಿವಕುಮಾರ್, ‌ಪ್ರಮೋದ್ ಹಾಗೂ ಅವರ ಕುಟುಂಬಕ್ಕೆ ಪಕ್ಷ ಎಲ್ಲವನ್ನೂ ಕೊಟ್ಟಿತ್ತು, ಪ್ರಮೋದ್ ನನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು, ಈಗ ಕೆಳಗೆ‌ ಕುಳಿತುಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಪ್ರಮೋದ್ ಮಧ್ವರಾಜ್ ಫೋಟೋಗಳನ್ನು ನೋಡಿ‌ ಬೇಸರವಾಯಿತು ಎಂದಿರುವ ಆದಷ್ಟು ಬೇಗ ಪಶ್ಚಾತಾಪ ಪಡುತ್ತಾರೆ ಎಂದು ತಿಳಿಸಿದ್ದಾರೆ.

ಮುಂದೆ ವಿಶೇಷ ಮೆಂಬರ್ ಶಿಪ್ ಡ್ರೈವ್ ಉಡುಪಿ ಜಿಲ್ಲೆಯಲ್ಲಿ ನಡೆಯಲಿದ್ದು, ಮುಂದೆ ಯಾರನ್ನು ಚುನಾವಣಾ ಕಣಕ್ಕೆ ಇಳಿಸಲಿದೆ ಎಂದು ಶೀಘ್ರದಲ್ಲೇ ಗೊತ್ತಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

- Advertisement -

Latest News

error: Content is protected !!