Saturday, June 28, 2025
Homeತಾಜಾ ಸುದ್ದಿಮಾಜಿ ಸಂಸದ ಪ್ರಜ್ವಲ್ ರೇವಣ್ಣ ಎಸ್ ಐಟಿ ಕಸ್ಟಡಿ ಇಂದಿಗೆ ಅಂತ್ಯ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಎಸ್ ಐಟಿ ಕಸ್ಟಡಿ ಇಂದಿಗೆ ಅಂತ್ಯ

spot_img
- Advertisement -
- Advertisement -

ಹಾಸನ: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಎಸ್ ಐಟಿ ಕಸ್ಟಡಿಯಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಎಸ್ ಐಟಿ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ.

ಇನ್ನು ನಿನ್ನೆ ಎಸ್ ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ರು. ಅಲ್ಲದೇ ಪುರುಷತ್ವ ಪರೀಕ್ಷೆ ಕೂಡ ನಡೆಯಿತು. ಇದಕ್ಕೂ ಮುನ್ನ ಮೇ 31ರಂದು ಎಸ್‌ಐಟಿ ವಶಕ್ಕೆ ಪಡೆದ ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಜರ್ಮನಿಯ ಮ್ಯೂನಿಚ್ ನಿಂದ ಹಿಂದಿರುಗಿದ ನಂತರ ಬಂಧನಕ್ಕೊಳಗಾದ ನಂತರ ಮೇ 31 ರಂದು ಪ್ರಜ್ವಲ್ ಅವರನ್ನು ಎಸ್ ಐಟಿ 42 ನೇ ಎಸಿಎಂಎಂ ಮುಂದೆ ಹಾಜರುಪಡಿಸಿತು.ನ್ಯಾಯಾಲಯವು ಅವರನ್ನು ಜೂನ್6 ರವರೆಗೆ ಎಸ್‌ಐಟಿಗೆ ಕಸ್ಟಡಿಗೆ ನೀಡಿತು. ಎಸ್‌ಐಟಿ ಆತನನ್ನು ಹಾಜರುಪಡಿಸಲಿದೆ. ಇಂದು ಅಂದರೆ ಗುರುವಾರ ಮತ್ತೆ ನ್ಯಾಯಾಲಯದ ಮುಂದೆ ಪ್ರಜ್ವಲ್ ಅವರನ್ನು ಹಾಜರುಪಡಿಸಲಿದ್ದಾರೆ.

- Advertisement -
spot_img

Latest News

error: Content is protected !!