Thursday, June 4, 2026
Homeಕರಾವಳಿಕರೆಂಟ್ ಶಾಕ್ ಹೊಡೆದು ಬೆಳ್ಳಾರೆಯ ವ್ಯಕ್ತಿ ಕೇರಳದಲ್ಲಿ ಸಾವು

ಕರೆಂಟ್ ಶಾಕ್ ಹೊಡೆದು ಬೆಳ್ಳಾರೆಯ ವ್ಯಕ್ತಿ ಕೇರಳದಲ್ಲಿ ಸಾವು

- Advertisement -
- Advertisement -

ಕೇರಳ:  ಕರೆಂಟ್ ಶಾಕ್ ಹೊಡೆದು ಬಂಟ್ವಾಳದ ವ್ಯಕ್ತಿಯೋರ್ವರು ಕೇರಳದ ಕಂಪೆನಿಯೊದರಲ್ಲಿ ಮೃತಪಟ್ಟ ಕೇರಳದಲ್ಲಿ ನಡೆದಿದೆ.ಸಜೀಪಮುನ್ನೂರು ಗ್ರಾಮದ ಮರ್ತಾಜೆ ನಿವಾಸಿ ವಿದ್ಯಾದರ ಕುಲಾಲ್(35) ಮೃತಪಟ್ಟ ವ್ಯಕ್ತಿ.

ಕೇರಳದ ಖಾಸಗಿ ಎಲೆಕ್ಟ್ರಾನಿಕ್ ಕಂಪೆನಿಯೊಂದರಲ್ಲಿ ವಿದ್ಯಾದರ ಕೆಲಸ ಮಾಡುತ್ತಿದ್ದರು. ಕರ್ತವ್ಯದಲ್ಲಿರುವಾಗ ವಿದ್ಯುತ್ ಶಾಕ್ ತಗುಲಿ ಅವರು ಸಾವನ್ನಪ್ಪಿದ್ದಾರೆ.

ಮೂಲತ: ಬೆಳ್ಳಾರೆ ನಿವಾಸಿಯಾಗಿದ್ದ ವಿದ್ಯಾದರ ಅವರು ಇತ್ತೀಚೆಗೆ ಸಜೀಪಮುನ್ನೂರು ಗ್ರಾಮದ ಮರ್ತಾಜೆ ಎಂಬಲ್ಲಿ ಜಾಗ ಖರೀದಿ ಮಾಡಿ ಮನೆ ಕಟ್ಟಿದ್ದರು. ಒಂದು ವರ್ಷದ ಹಿಂದೆ ಇವರಿಗೆ ವಿವಾಹವಾಗಿದ್ದು, ಪತ್ನಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದಾರೆ. ಪತ್ನಿ ತುಂಬು ಗರ್ಭಿಣಿಯಾಗಿದ್ದು, ಬರುವ ತಿಂಗಳು ಸೀಮಂತಕ್ಕೆ ದಿನಾಂಕ ನಿಗದಿಯಾಗಿತ್ತು. ಹೀಗಿರುವಾಗಲೇ ಅವರು ಸಾವನ್ನಪ್ಪಿರೋದು ಎಲ್ಲರನ್ನು ದುಃಖಕ್ಕೆ ತಳ್ಳಿದೆ.

- Advertisement -

Latest News

error: Content is protected !!