Thursday, April 25, 2024
Homeತಾಜಾ ಸುದ್ದಿಹುಲಿಯೊಂದಿಗೆ ಸೆಣಸಾಡಿ ತನ್ನ ಮಗುವನ್ನು ಹುಲಿಯ ಬಾಯಿಯಿಂದ ರಕ್ಷಿಸಿದ ದಿಟ್ಟ ನಾರಿ

ಹುಲಿಯೊಂದಿಗೆ ಸೆಣಸಾಡಿ ತನ್ನ ಮಗುವನ್ನು ಹುಲಿಯ ಬಾಯಿಯಿಂದ ರಕ್ಷಿಸಿದ ದಿಟ್ಟ ನಾರಿ

spot_img
- Advertisement -
- Advertisement -

ಮಧ್ಯಪ್ರದೇಶ; ತಾಯಿಯೊಬ್ಬಳು ಹುಲಿಯೊಂದಿಗೆ ಸೆಣಸಾಡಿ ಹುಲಿಯ ಬಾಯಿಯಿಂದ ತನ್ನ ಮಗುವನ್ನು ರಕ್ಷಿಸಿರುವ ಘಟನೆ ಮಧ್ಯಪ್ರದೇಶದ ಬಾಂಧವ್ ಗಢ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

ರೋಹಾನಿಯಾ ಗ್ರಾಮದಲ್ಲಿ ತಾಯಿ ‌ಮತ್ತು ಮಗು ತೋಟದಲ್ಲಿದ್ದ ವೇಳೆ ಹುಲಿ ದಾಳಿ ಮಾಡಿದೆ.ಈ ವೇಳೆ ತಾಯಿ ಹುಲಿಯ ಬಾಯಿಯಿಂದ ಸೆಣೆಸಾಡಿ ಮಗುವನ್ನು ರಕ್ಷಿಸಿದ್ದಾಳೆ. ಹುಲಿ ದಾಳಿಯಲ್ಲಿ ತಾಯಿ ಮತ್ತು ಮಗು ಗಂಭೀರವಾಗಿ ಗಾಯಗೊಂಡಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

ತನ್ನ ತೋಟದಲ್ಲಿ ಮಗುವಿನ ಜೊತೆ ಮಹಿಳೆ ನಿಂತಿದ್ದ ವೇಳೆ ಹುಲಿ ದಾಳಿ ನಡೆಸಿದೆ.‌ಕೂಡಲೇ ಮಗುವನ್ನು ತನ್ನ ತೋಳಿನಲ್ಲಿ ಹಿಡಿದುಕೊಂಡು ಹುಲಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆ ಹರಸಾಹಸ ಪಟ್ಟಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಹುಲಿಯ ದಾಳಿಯಿಂದಾಗಿ ಮಗುವಿನ ತಲೆಗೆ ಗಾಯವಾಗಿದ್ದು, ಮಹಿಳೆಯ ದೇಹವೆಲ್ಲಾ ಗಾಯಗೊಂಡಿದೆ‌.ತಾಯಿ ಮತ್ತು ಮಗು ಜಬಲ್ಪುರ್ ಮೆಡಿಕಲ್ ಕಾಲೇಜ್ ನಲ್ಲಿ ಇದೀಗ ಚಿಕಿತ್ಸೆ ‌ಪಡೆಯುತ್ತಿದ್ದಾರೆ.

- Advertisement -
spot_img

Latest News

error: Content is protected !!