Wednesday, June 24, 2026
Homeಕರಾವಳಿಮೇ 26, ಮೇ 27 ರಂದು ದ.ಕ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ

ಮೇ 26, ಮೇ 27 ರಂದು ದ.ಕ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ

- Advertisement -
- Advertisement -

ಮಂಗಳೂರು: ಮಣ್ಣಗುಡ್ಡ ಉಪಕೇಂದ್ರದ ಉರ್ವಮಾರ್ಕೆಟ್ ಮತ್ತು ಮಠದಕಣಿ ಫೀಡರ್‌ಗಳಲ್ಲಿ ಮೇ 26 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ಕಾಮಗಾರಿ ನಡೆಯಲಿದೆ.

ಈ ಕಾರಣದಿಂದಾಗಿ ಗಾಂಧಿನಗರ, ಅಭಿಯಾನ್ ಪ್ಯಾಲೇಸ್, ಲೇಡಿಹಿಲ್, ಗಾಂಧಿಪಾರ್ಕ್, ಉರ್ವಗಾರ್ಡ್, ಸೋಡ ಶೋರೂಂ, ಕೊರಗಜ್ಜ ದೈವಸ್ಥಾನ, ಸುಲ್ತಾನ್‌ಬತ್ತೇರಿ ರಸ್ತೆ, ಬಿಲ್ಲವ ಸಂಘ, ಗುಂಡೂರಾವ್ ಲೇನ್, ಮಿಷನ್ ಗೋರಿ ರಸ್ತೆ, ಬರ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಅದೇ ರೀತಿ, ಬಿಜೈ ಉಪಕೇಂದ್ರದ ಬಿಜೈ, ಭಾರತೀನಗರ ಮತ್ತು ವಿವೇಕನಗರ ಫೀಡರ್‌ಗಳಲ್ಲಿ ಮೇ 27 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದ್ದು, ಹೀಗಾಗಿ ಬಿಜೈ ನ್ಯೂರೋಡ್, ಸಂಕೈಗುಡ್ಡ, ಎಂಸಿಎಫ್ ಕಾಲನಿ, ಆನೆಗುಂಡಿ, ಬಿಜೈ ಚರ್ಚ್, ಬಿಜೈ ಮ್ಯೂಸಿಯಂ, ಭಾರತೀನಗರ, ಚಂದ್ರಿಕಾ ಬಡಾವಣೆ ರಸ್ತೆ, ಕೊಡಿಯಾಲ್ ಬೈಲ್, ಕೊಡಿಯಾಲ್ ಗುತ್ತು, ವಿವೇಕನಗರ, ಶ್ರೀದೇವಿ ಕಾಲೇಜ್ ರಸ್ತೆ, ಕೆಎಸ್ಸಾರ್ಟಿಸಿ, ಸಿ.ಜಿ ಕಾಮತ್ ರಸ್ತೆ, ಜೈಲ್ ರಸ್ತೆ, ಎಂ.ಜಿ ರಸ್ತೆ, ಲಾಲ್ ಬಾಗ್ ರಸ್ತೆ, ಬಳ್ಳಾಲ್‌ಬಾಗ್, ಮಾನಸ ಟವರ್ ಮತ್ತು ಇದರ ಆಸುಪಾಸಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!