Tuesday, June 9, 2026
Homeಕರಾವಳಿಕಡಬ; ವಿದ್ಯುತ್ ಲೈನ್  ದುರಸ್ಥಿ ಮಾಡುವಾಗ ಶಾಕ್ ತಗುಲಿ ಲೈನ್ ಮ್ಯಾನ್ ಸಾವು

ಕಡಬ; ವಿದ್ಯುತ್ ಲೈನ್  ದುರಸ್ಥಿ ಮಾಡುವಾಗ ಶಾಕ್ ತಗುಲಿ ಲೈನ್ ಮ್ಯಾನ್ ಸಾವು

- Advertisement -
- Advertisement -

ಕಡಬ; ವಿದ್ಯುತ್  ಕಂಬವೇರಿ  ವಿದ್ಯುತ್ ಲೈನ್  ದುರಸ್ಥಿ ಮಾಡುವಾಗ ಶಾಕ್ ತಗುಲಿ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಎಂಬಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ  ಮೃತ ದುರ್ದೈವಿ.  ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ  ಮುಳಿಮಜಲು ಎಂಬಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗಿತ್ತು. ಇದರ ದುರಸ್ತಿಗೆಂದು ಕಂಬ ಏರಿದ್ದರು.ಈ  ವೇಳೆ ಹಠಾತ್ ವಿದ್ಯುತ್ ಶಾಕ್ ಹೊಡೆದಿದೆ.

ವಿದ್ಯುತ್ ಶಾಕ್ ನಿಂದಾಗಿ  ಕೆಲ ಕಾಲ ಕಂಬದಲ್ಲೆ ಲೈನ್ ಮ್ಯಾನ್ ಉಳಿದಿದ್ದರು ಎನ್ನಲಾಗಿದೆ. ಬಳಿಕ  ಸ್ಥಳೀಯರು ಮರದ ಕೋಲಿನ ಸಹಾಯದಿಂದ ಅವರನ್ನು ಕೆಳಗಿಳಿಸಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.  ಆದರ ಅಷ್ಟರಲ್ಲಿ ದ್ಯಾಮಣ್ಣ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!