Monday, June 17, 2024
Homeತಾಜಾ ಸುದ್ದಿಸೌರಮಂಡಲದ ಆಚೆ ಸಂಭಾವ್ಯ ರೇಡಿಯೋ ಸಿಗ್ನಲ್- ಇದು ಏಲಿಯನ್ಸ್ ಇರುವಿಕೆಯ ಸೂಚನೆಯೇ?

ಸೌರಮಂಡಲದ ಆಚೆ ಸಂಭಾವ್ಯ ರೇಡಿಯೋ ಸಿಗ್ನಲ್- ಇದು ಏಲಿಯನ್ಸ್ ಇರುವಿಕೆಯ ಸೂಚನೆಯೇ?

spot_img
- Advertisement -
- Advertisement -

ವಾಷಿಂಗ್ಟನ್: ವಿಜ್ಞಾನಿಗಳ ತಂಡವೊಂದು ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್’ ಬರುತ್ತಿರುವುದನ್ನು ಪತ್ತೆ ಹಚ್ಚಿದ್ದು ಈ ಬೆಳವಣಿಗೆಯು ಏಲಿಯನ್ಸ್ ಇರುವಿಕೆ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ. 51 ಜ್ಯೋತಿರ್ವರ್ಷಗಳಷ್ಟು ದೂರ ಇರುವ ಈ ನಕ್ಷತ್ರ ದಿಂದ ರೇಡಿಯೋ ಸಿಗ್ನಲ್ ಹೊರಹೊಮ್ಮುತ್ತಿದೆ. ನೆದರ್ಲೆಂಡ್’ನಲ್ಲಿರುವ ಲೋ ಫ್ರೀಕ್ವೆನ್ಸಿ ಅರ್ರೆ ಎಂಬ ರೇಡಿಯೋ ಟೆಲಿಸ್ಕೋಪ್ ಬಳಸಿ ಟೌ ಬೂಟ್ಸ್ ಎಂಬ ನಕ್ಷತ್ರ ವ್ಯವಸ್ಥೆಯಿಂದ ರೇಡಿಯೋ ಸಿಗ್ನಲ್ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ಈ ರೇಡಿಯೋ ಸಿಗ್ನಲ್ ಬಗ್ಗೆ ವರದಿ ಮಾಡುತ್ತಿದ್ದು.ಈ ರೇಡಿಯೋ ಸಿಗ್ನಲ್ ಬರುತ್ತಿರುವುದು ಸೌರ ಮಂಡಲದಾಚೆ ಇರುವ ಟೌ ಬೂಟ್ಸ್ ಎಂಬ ವ್ಯವಸ್ಥೆಯಿಂದ ಎಂದು ಹೇಳಲಾಗಿದೆ.

ಈ ಹಿಂದೆ ಮಂಗಳ ಗ್ರಹದಿಂದ ರೇಡಿಯೋ ತರಂಗಗಳು ಹೊಮ್ಮುತ್ತಿರುವುದಾಗಿ ವಾದಿಸಿದ್ದರು. ಅಲ್ಲಿ ಜೀವಿಗಳು ಇರಬಹುದು ಎಂದು ಅಂದಾಜಿಸಲಾಗಿತ್ತು. ಸಂಶೋಧನೆಗಳಿಂದ ಅಲ್ಲಿ ಜೀವಿಗಳು ನೆಲೆಸಿಲ್ಲ ಎಂಬ ವರದಿಬಂದ ನಂತರ ಈಗ
ಮತ್ತೆ ಏಲಿಯನ್ ಗಳು ಬೇರೊಂದು ಗ್ರಹದ ಮೇಲೆ ವಾಸಿಸುತ್ತವೆಯೇ ಸೌರಮಂಡಲದಾಚೆಯಿಂದ ರೇಡಿಯೋ ಸಿಗ್ನಲ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಸಂಶೋಧನೆಗಳನ್ನು ಆರಂಭಿಸಿದ್ದಾರೆ.

- Advertisement -
spot_img

Latest News

error: Content is protected !!