Thursday, June 25, 2026
Homeಕರಾವಳಿಸುಳ್ಯ: ಮಗನಿಂದ ಹಲ್ಲೆಗೆ ಒಳಗಾಗಿದ್ದ ತಂದೆ ಆಸ್ಪತ್ರೆಯ ಕಟ್ಟಡದಿಂದ ಹಾರಿ ಆತ್ಮಹತ್ಯೆ

ಸುಳ್ಯ: ಮಗನಿಂದ ಹಲ್ಲೆಗೆ ಒಳಗಾಗಿದ್ದ ತಂದೆ ಆಸ್ಪತ್ರೆಯ ಕಟ್ಟಡದಿಂದ ಹಾರಿ ಆತ್ಮಹತ್ಯೆ

- Advertisement -
- Advertisement -

ಸುಳ್ಯ: ಮಗನಿಂದ ಹಲ್ಲೆಗೊಳಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯೊಬ್ಬರು ಆಸ್ಪತ್ರೆಯ‌ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಸರಗೋಡು ಬಂದ್ಯಡ್ಕದ ಲಕ್ಷ್ಮಣ ಗೌಡ(69) ಆತ್ಮಹತ್ಯೆಗೆ ಶರಣಾದವರು. ಅಪ್ಪ-ಮಗನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಆಗ ಮಗ ಅಪ್ಪನಿಗೆ ಬಿದಿರಿನ ಸಲಾಕೆಯಿಂದ ಹೊಡೆದಿದ್ದ. ಈ ವೇಳೆ ತೀವ್ರ ಗಾಯಗೊಂಡ ಲಕ್ಷ್ಮಣ ಗೌಡ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಅವರ ಅಳಿಯ ಊಟ ತರಲೆಂದು ಹೋದ ವೇಳೆ ಆಸ್ಪತ್ರೆ ಕಟ್ಟಡದಿಂದ ಹಾರಿದ್ದಾರೆ.

ಈ ವೇಳೆ ಗಂಭೀರ ಗಾಯಗೊಂಡಿದ್ದ ಲಕ್ಷ್ಮಣ ಗೌಡರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ತನ್ನ ಮಗ ಹಾಗೂ ಸೊಸೆಯ ಕಾರಣ ಗಲಾಟೆಯಾಗಿ ಮನನೊಂದು ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಲಕ್ಷ್ಮಣ ಗೌಡರ ಪತ್ನಿ ಲಲಿತಾ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!