Thursday, May 2, 2024
Homeಕರಾವಳಿಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಅವಳಿ ಜೋಡಿ ಮಕ್ಕಳಿಗೆ ಅಂಚೆ ಖಾತೆ

ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಅವಳಿ ಜೋಡಿ ಮಕ್ಕಳಿಗೆ ಅಂಚೆ ಖಾತೆ

spot_img
- Advertisement -
- Advertisement -

ಮಂಗಳೂರು: ಕೈರಂಗಳ ಶಾಖೆಯ ವ್ಯಾಪ್ತಿಯ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಹದಿನೇಳು ಜೋಡಿ ಅವಳಿ ಮಕ್ಕಳಿಗೆ ಮಂಗಳೂರು ಅಂಚೆ ವಿಭಾಗದಿಂದ ಮಕ್ಕಳ ಸುಕನ್ಯಾ ಸಮೃದ್ಧಿ, ಮಹಿಳಾ ಸಮ್ಮಾನ ಪ್ರಮಾಣ ಪತ್ರ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಗಳನ್ನು ತೆರೆಯಲಾಯಿತು.

ಶಾಲೆಯಲ್ಲಿ ಶುಕ್ರವಾರದಂದು ನಡೆದ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ಮಾತನಾಡಿ, ‘ಕಳೆದ 18 ವರ್ಷಗಳಿಂದ ಈ ಶಾಲೆಯು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದು, 913 ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಂಗಳೂರು ಅಂಚೆ ವಿಭಾಗದ ಸಹಕಾರದಲ್ಲಿ ಗ್ರಾಮೀಣ ಮಕ್ಕಳಲ್ಲಿ ಉಳಿತಾಯ ಪ್ರಜ್ಞೆ ಮೂಡಿಸುವ ಅಂಗವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗಿದೆ’ ಎಂದರು.

ಈ ಸಂದರ್ಭದಲ್ಲಿ ಉಪ ಅಂಚೆ ಅಧೀಕ್ಷಕ ಪಿ.ದಿನೇಶ್‌, ಅಂಚೆ ನಿರೀಕ್ಷಕ ಸುರೇಶ್‌, ತಾಲ್ಲೂಕು ಪಂಚಾಯಿತಿ ಸದಸ್ಯ ನವೀನ್, ಸಹಕಾರಿ ಬ್ಯಾಂಕ್‌ ನಿರ್ದೇಶಕ ಜಯರಾಂ ಶೆಟ್ಟಿ, ಪ್ರಾಂಶುಪಾಲ ಶ್ರೀಹರಿ, ಅಂಚೆ ಇಲಾಖೆಯ ಸುಭಾಷ್ ಸಾಲಿಯಾನ್, ರೋಹನ್ ಲೂಯಿಸ್‌ ಇದ್ದರು. ಅಂಚೆ ಇಲಾಖೆಯದಯಾನಂದ ಕತ್ತಲ್ ಸಾರ್ ಕಾರ್ಯಕ್ರಮ ನಿರೂಪಿಸಿದರು. ಸೇರಾಜೆ ಶ್ರೀನಿವಾಸ್ ಭಟ್ ಸ್ವಾಗತಿಸಿದರು. ಚಂದ್ರಕುಮಾರ್ ವಂದಿಸಿದರು.

- Advertisement -
spot_img

Latest News

error: Content is protected !!