- Advertisement -
![]()
- Advertisement -
ಕಡಬ: ಫೇಸ್ ಬುಕ್ ನಲ್ಲಿ ಕೋಮು ಸಾಮರಸ್ಯ ಕದಡುವಂತಹ ಪೋಸ್ಟ್ ಹಾಕಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
30.08.2025 ರಂದು ಪ್ರಕರಣದ ಕಡಬದ ಕೆ, ಅಬ್ದುಲ್ ಹಕೀಂ, ಎಂಬವರು, ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಖಾತೆಯನ್ನು ಪರಿಶೀಲಿಸುತ್ತಿರುವಾಗ Ibrahim Mitthodi ExMuslim ಎಂಬ Facebook ಖಾತೆಯಲ್ಲಿ ಧರ್ಮ-ಧರ್ಮಗಳ ಮಧ್ಯೆ ದ್ವೇಷ ಉಂಟು ಮಾಡುವಂತೆ ಮಾಡಿ ಸಮಾಜದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಪ್ರಚೋದನಾಕಾರಿ ಪೋಸ್ಟ್ ಒಂದನ್ನು ಗಮನಿಸಿದ್ದಾರೆ. ಅದರಂತೆ ಅವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -


