Monday, April 29, 2024
Homeಕರಾವಳಿಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ಆಕ್ಷೇಪಾರ್ಹ ಬರಹ; ವ್ಯಕ್ತಿಯೊಬ್ಬರ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ಆಕ್ಷೇಪಾರ್ಹ ಬರಹ; ವ್ಯಕ್ತಿಯೊಬ್ಬರ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

spot_img
- Advertisement -
- Advertisement -

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ಆಕ್ಷೇಪಾರ್ಹ ಬರಹ ಬರೆದ ಬಗ್ಗೆ ವ್ಯಕ್ತಿಯೊಬ್ಬರ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ವರ್ಗದವರು ಹಾಗೂ ಒಳಾಂಗಣ ನೌಕರರು ದೂರು ನೀಡಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯ ಫೋಟೋ ತೆಗೆಯುಲು ನಿಷೇಧವಿದ್ದರೂ ಕುಲ್ಕುಂದದ ವ್ಯಕ್ತಿಯೊಬ್ಬರು ಗರ್ಭ ಗುಡಿಯ ಪೋಟೋ ತೆಗೆದಿದ್ದಾರೆ. ಅಲ್ಲದೆ ಈ ಫೋಟೋವನ್ನು ಕುಕ್ಕೆ ಶ್ರೀ ದೇವಾಲಯ ಉಳಿಸಿ, ಶೈವಾಗಮ ಕ್ಷೇತ್ರ ಶ್ರೀ ಕುಕ್ಕೆ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದಲ್ಲದೆ ಅರ್ಚಕರು, ಪುರೋಹಿತರ ನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳನ್ನು, ನಿಂದಾನಾತ್ಮಕವಾಗಿ ಬರೆದು ಇಲ್ಲಿನ ಅರ್ಚಕರನ್ನು ತೇಜೋವಧೆ ಮಾಡುವ ಬರಹಗಳನ್ನು ಬರೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು  “ತುಪ್ಪ ಕಳವಾಗುತ್ತಿರುವ ಬಗ್ಗೆ ಮೂರು ಬಾರಿ ದೂರು ಕೊಟ್ಟರೂ ಕಮಿಷನ್ ಆಸೆಗೆ ಠಾಣೆಗೆ ಕಾರ್ಯನಿರ್ವಹಣಾಧಿಕಾರಿ ದೂರು ನೀಡಿಲ್ಲ ,ಕದ್ದ ತುಪ್ಪದಲ್ಲಿ ಅವರಿಗೂ ಪಾಲು ಇರಬಹುದು” ಎಂಬ ಬರಹಗಳು ಹರಿದಾಡುತ್ತಿದೆ.

ಈ ಬಗ್ಗೆ  ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಪ್ರತಿಕ್ರಿಯಿಸಿದ್ದು, ವಾಟ್ಸಾಪ್ ನಲ್ಲಿ ಹರಿದಾಡಿದ ವಿಚಾರ ನನ್ನ ಗಮನಕ್ಕೂ ಬಂದಿದೆ, ನಮ್ಮ ಆಡಳಿತ ಸಮಿತಿಯಿಂದಲೂ ದೂರು ನೀಡಲಾಗಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!