Friday, March 29, 2024
Homeಆರಾಧನಾನಾಳೆಯಿಂದ ದೇವಸ್ಥಾನಗಳಲ್ಲಿ ಸಿಗಲಿದೆ ಪೂಜಾ ಸೇವೆ, ಪ್ರಸಾದ ವಿತರಣೆ

ನಾಳೆಯಿಂದ ದೇವಸ್ಥಾನಗಳಲ್ಲಿ ಸಿಗಲಿದೆ ಪೂಜಾ ಸೇವೆ, ಪ್ರಸಾದ ವಿತರಣೆ

spot_img
- Advertisement -
- Advertisement -

ಬೆಂಗಳೂರು: ನಾಳೆಯಿಂದ ದೇವಸ್ಥಾನಗಳಲ್ಲಿ ಪೂಜಾ ಸೇವೆ ಮತ್ತು ಪ್ರಸಾದ ವಿತರಣೆಗೆ ಅವಕಾಶ ನೀಡಲಾಗಿದೆ. ಆದರೆ ಯಾವುದೇ ರೀತಿಯ ಜಾತ್ರೆ, ಉತ್ಸವ, ಮೆರವಣಿಗೆ ಮತ್ತು ಮೇಳಗಳಿಗೆ ಅವಕಾಶ ನೀಡಲಾಗಿಲ್ಲ. ಕೋವಿಡ್ ಮಾರ್ಗಸೂಚಿಗಳ ಪ್ರಕಾರವಾಗಿ ಪೂಜಾ ಸೇವೆ ಮತ್ತು ಪ್ರಸಾದ ವಿತರಣೆಗೆ ಸೂಚನೆ ನೀಡಲಾಗಿದೆ.

ಕಳೆದ ಬಾರಿ ಹೊರಡಿಸಿದ್ದ ಆದೇಶದಲ್ಲಿ ದೇವಸ್ಥಾನಗಳಲ್ಲಿ ಕೇವಲ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ದೇವಾಲಯಗಳಲ್ಲಿ ಪೂಜೆ ಮತ್ತು ಪ್ರಸಾದ ವಿತರಣೆಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಹಿಂದೂ ಧರ್ಮಾದಾಯ ಮತ್ತು ಧಾರ್ಮಿಕ ದತ್ತಿಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದರು.

ಅದರಂತೆ ರಾಜ್ಯ ಸರ್ಕಾರ ಇಂದು ಹೊರಡಿಸಿರುವ ಆದೇಶದ ಅನ್ವಯ ನಾಳೆಯಿಂದಲೇ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರಗಳು ಮತ್ತು ಇತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಆದರೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ರಾಜ್ಯ ಸರ್ಕಾರ ಆದೇಶದಲ್ಲಿ ಸ್ಪಷ್ಟವಾಗಿ ಸೂಚನೆ ನೀಡಿದೆ.

- Advertisement -
spot_img

Latest News

error: Content is protected !!