Friday, June 5, 2026
Homeಕರಾವಳಿಕೋಳಿ ಅಂಕ ನಡೆಯುತ್ತಿದ್ದಾಗ ಪೊಲೀಸರ ದಾಳಿ ನಾಲ್ವರು ವಶಕ್ಕೆ

ಕೋಳಿ ಅಂಕ ನಡೆಯುತ್ತಿದ್ದಾಗ ಪೊಲೀಸರ ದಾಳಿ ನಾಲ್ವರು ವಶಕ್ಕೆ

- Advertisement -
- Advertisement -

ಮಂಗಳೂರು: ಇಲ್ಲಿನ ಪದವು ಗ್ರಾಮದ ಮುಗ್ರೋಡಿ ಕಟ್ಟೆಪುಣಿ ಎಂಬಲ್ಲಿರುವ ಮೈದಾನದಲ್ಲಿ ಕೋಳಿ ಅಂಕಕ್ಕೆ ಹಣವನ್ನು ಪಣವಾಗಿಟ್ಟು ಬಾಜಿ ಆಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಪ್ರಸಾದ್, ದೀಪಕ್, ಕೃಷ್ಣಪ್ಪ, ವಿಶ್ವನಾಥ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ ಆರು ಅಂಕದ ಕೋಳಿ ಹಾಗೂ 1,280 ರೂ. ನಗದು ಮತ್ತು ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು ಮಹಜರು ವಶಪಡಿಸಿಕೊಳ್ಳಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!