Friday, June 5, 2026
Homeಕರಾವಳಿಸುಳ್ಯದ ಗೂನಡ್ಕದಲ್ಲಿ ಯುವಕನಿಗೆ ಬೊಲೆರೋ ವಾಹನ ಡಿಕ್ಕಿ : ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಹಿಡಿದ ಸ್ಥಳೀಯರು

ಸುಳ್ಯದ ಗೂನಡ್ಕದಲ್ಲಿ ಯುವಕನಿಗೆ ಬೊಲೆರೋ ವಾಹನ ಡಿಕ್ಕಿ : ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಹಿಡಿದ ಸ್ಥಳೀಯರು

- Advertisement -
- Advertisement -

ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿ ಯುವಕನಿಗೆ ಡಿಕ್ಕಿಯಾಗಿ ಪರಾರಿಯಾಗಲು ಯತ್ನಿಸಿದ ಬೊಲೆರೋ ಚಾಲಕನನ್ನು ಸ್ಥಳೀಯರು ಹಿಡಿದು ನಿಲ್ಲಿಸಿದ ಘಟನೆ ನಡೆದಿದೆ.  

ಸಂಪಾಜೆ ಗ್ರಾಮದ ಗೂನಡ್ಕ ತಿರುವೊಂದರಲ್ಲಿ ಸಲೀಂ ಎಂಬ ಯುವಕ ಹೋಗುತ್ತಿದ್ದಾಗ ಆ ರಸ್ತೆಯಾಗಿ ಬಂದ ದಾವಣಗೆರೆಯ ಬೊಲೆರೋ ವಾಹನವೊಂದು ಢಿಕ್ಕಿ ಹೊಡೆದಿದೆ.  ಬೊಲೆರೋ ಚಾಲಕ ವಾಹನ ನಿಲ್ಲಿಸದೆ ಹೋಗಿದ್ದು, ಬಳಿಕ ಊರವರು ಹಿಂಬಾಲಿಸಿ ಚಟ್ಟಿಕಲ್ಲು ಎಂಬಲ್ಲಿ ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೊಲೆರೋ ವಾಹನ ಢಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಸಲೀಂ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!