Wednesday, June 24, 2026
Homeತಾಜಾ ಸುದ್ದಿರೇಣುಕಾಸ್ವಾಮಿ ಕೊಲೆ ಪ್ರಕರಣ; ಕಾಮಿಡಿ ಸ್ಟಾರ್ ಚಿಕ್ಕಣ್ಣಗೆ ಪೊಲೀಸ್ ನೋಟಿಸ್

ರೇಣುಕಾಸ್ವಾಮಿ ಕೊಲೆ ಪ್ರಕರಣ; ಕಾಮಿಡಿ ಸ್ಟಾರ್ ಚಿಕ್ಕಣ್ಣಗೆ ಪೊಲೀಸ್ ನೋಟಿಸ್

- Advertisement -
- Advertisement -

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಿಡಿ ಸ್ಟಾರ್ ಚಿಕ್ಕಣ್ಣಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ನಟ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಭಾಗಿಯಾಗುವ ದಿನ ಮಧ್ಯಾಹ್ನ ಪ್ರಕರಣದ ಇನ್ನೋರ್ವ ಆರೋಪಿ ವಿನಯ್ ನ ಸ್ಟೋನಿ ಬ್ರುಕ್ ಹೋಟೆಲ್ ನಲ್ಲಿ ಪಾರ್ಟಿಯಲ್ಲಿ ದರ್ಶನ್ ಜೊತೆ ಚಿಕ್ಕಣ್ಣ ಭಾಗಿಯಾಗಿದ್ದರು. ದರ್ಶನ್, ವಿನಯ್, ಪವನ್ ಹಾಗೇ ಇನ್ನೊಬ್ಬ ನಿರ್ಮಾಪಕರು ಸೇರಿ ನಾಲ್ಕು ಜನ ಪಾರ್ಟಿ ಮಾಡಿದ್ದರು ಎನ್ನಲಾಗಿದೆ.

ಇಲ್ಲಿ ಪಾರ್ಟಿ ಮುಗಿಸಿ ನೇರವಾಗಿ ದರ್ಶನ್ ಪಟ್ಟಣಗೆರೆಯ ವಿನಯ್ ಕಾರ್ ಶೆಡ್ ಗೆ ತೆರಳಿ ಅಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಹಾಗಾಗಿ ಪಾರ್ಟಿಯಲ್ಲಿ ಕೊಲೆ ಬಗ್ಗೆ ಏನಾದರೂ ಮಾತುಕತೆ ನಡೆದಿದ್ಯಾ ಎಂಬ ಬಗ್ಗೆ ವಿಚಾರಿಸಲು ಕಾರಣಕ್ಕೆ ಚಿಕ್ಕಣ್ಣಗೆ ವಿಚಾರಣೆ ಹಾಜರಾಗುವಂತೆ ಕಾಮಾಕ್ಷಿ ಪಾಳ್ಯ ಠಾಮಮೆ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!