Saturday, June 6, 2026
Homeಕರಾವಳಿಮಂಗಳೂರು; : ರೈಲ್ವೇ ಮೇಲ್ಸೆತುವೆ ಪೊಲೀಸರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸಡನ್ ಆಗಿ ಬಂದ...

ಮಂಗಳೂರು; : ರೈಲ್ವೇ ಮೇಲ್ಸೆತುವೆ ಪೊಲೀಸರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸಡನ್ ಆಗಿ ಬಂದ ರೈಲು; ಮುಂದೇನಾಯ್ತು  ಗೊತ್ತಾ?

- Advertisement -
- Advertisement -

ಮಂಗಳೂರು; : ರೈಲ್ವೇ ಮೇಲ್ಸೆತುವೆ ಪೊಲೀಸರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸಡನ್ ಆಗಿ ರೈಲು ಬಂದ ಘಟನೆ  ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಬೆವೂರು ರೈಲ್ವೇ ಮೇಲ್ವೇತುವೆಯಲ್ಲಿ ನಡೆದಿದೆ.
ಕೆಳಗಡೆ ಮೂಲ್ಕಿ ರೈಲ್ವೇ ಸ್ಟೇಷನ್ ಸಿಬ್ಬಂದಿ ಕುಮಾರ್ ಎಂಬವರ ಪುತ್ರನಾದ ಮೂಲತಃ ತಮಿಳುನಾಡು ನಿವಾಸಿ ವಿಶ್ಲೇಷ್ (26) ಭಾನುವಾರ ರಾತ್ರಿ 8:30 ಸುಮಾರಿಗೆ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶ್ಲೇಷ್ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಸುರತ್ಕಲ್ ಎನ್‌ಐಟಿಕೆ ಯಲ್ಲಿ ತರಬೇತಿ ಮಾಡುತ್ತಿದ್ದರು ಎನ್ನಲಾಗಿದ್ದು, ಕೆಲಸ ಸಿಗದ ಹಿನ್ನೆಲೆ ಅದೇ ಕೊರಗಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ನಡುವೆ ಯುವಕನ ಆತ್ಮಹತ್ಯೆಯ ತೀವ್ರ ಇಕ್ಕಟ್ಟಾಗಿರುವ ಕುಬೆವೂರು ರೈಲ್ವೆ ಮೇಲ್ವೇತುವೆ ಕೆಳಗಡೆ ನಡೆದಿದ್ದು, ತನಿಖೆಗೆ ಹೋದ ನಾಲ್ವರು ಮೂಲ್ಕಿ ಪೊಲೀಸ್ ಠಾಣೆಯ ಅಧಿಕಾರಿಗಳಾದ ಎಎಸ್‌ಐ ಸಂಜೀವ, ಚಂದ್ರಶೇಖರ್, ಶಂಕರ್ ಬಸವರಾಜ್ ತನಿಖೆ ನಡೆಸುತ್ತಿರುವ ವೇಳೆ ಮತ್ತೊಂದು ರೈಲು ಹಾದು ಹೋಗಿದ್ದು ಕೂಡಲೇ ಬದಿಗೆ ಹಾರಿ ತಪ್ಪಿಸಿಕೊಂಡು ಪವಾಡ ಸದೃಶ ಪಾರಾಗಿದ್ದಾರೆ.

- Advertisement -

Latest News

error: Content is protected !!