Thursday, May 2, 2024
Homeಕರಾವಳಿಅ. 28ರ ಶನಿವಾರ ಚಂದ್ರಗ್ರಹಣ ಹಿನ್ನೆಲೆ ; ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕಟೀಲು...

ಅ. 28ರ ಶನಿವಾರ ಚಂದ್ರಗ್ರಹಣ ಹಿನ್ನೆಲೆ ; ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕಟೀಲು ದೇವಸ್ಥಾನದಲ್ಲಿ ದೇವರ ದರ್ಶನದ ಸಮಯದಲ್ಲಿ ಬದಲಾವಣೆ

spot_img
- Advertisement -
- Advertisement -

ಸುಬ್ರಹ್ಮಣ್ಯ: ಅ. 28ರ ಶನಿವಾರ ಚಂದ್ರಗ್ರಹಣ ಹಿನ್ನೆಲೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.ರಾತ್ರಿಯ ಮಹಾಪೂಜೆ ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯ ವಾಗಲಿದ್ದು ಬಳಿಕ ದೇವರ ದರ್ಶನ ಇರುವುದಿಲ್ಲ, ರಾತ್ರಿಯ ಭೋಜನ ಇರುವುದಿಲ್ಲ.ಸಾಯಂಕಾಲ ಆಶ್ಲೇಷಾ ಬಲಿ ಸೇವೆಯೂ ಇರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

ಕಟೀಲು ದೇವಸ್ಥಾನ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಕ್ತರಿಗೆ ದೇವಿಯ ದರ್ಶನ ಸಮಯ ಬದಲಾವಣೆ ಇಲ್ಲ. ರಾತ್ರಿಯ ಮಹಾಪೂಜೆ ಸಾಯಂಕಾಲ ಆರೂವರೆ ಒಳಗೆ ಮುಗಿಯುತ್ತದೆ. ಗ್ರಹಣದ ಸಮಯ ವಿಶೇಷ ಅಭಿಷೇಕ, ಮಧ್ಯಕಾಲದಲ್ಲಿ ವಿಶೇಷ ಪೂಜೆ ಇರುತ್ತದೆ. ಗ್ರಹಣಸಮಯಕ್ಕೆ ದೇವಿಯ ದರ್ಶನಕ್ಕೆ, ತುಪ್ಪ, ಎಣ್ಣೆ ಸಮರ್ಪಣೆಗೆ ಅವಕಾಶ ಇದೆ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!