- Advertisement -
- Advertisement -
ಬೆಂಗಳೂರು: ಸೋಶಿಯಲ್ ಮೀಡಿಯಾ ಸದ್ದು ಮಾಡುತ್ತಿರುವ ನೂರಕ್ಕೂ ಹೆಚ್ಚಿನ ರೀಲ್ಸ್ ಸ್ಟಾರ್‌ಗಳಿಗೆ ಸೈಬರ್ ಕ್ರೈಂ ಅವರು ನೋಟಿಸ್ ನೀಡಿ ಎಚ್ಚರಿಕೆ ಕೊಟ್ಟಿದ್ದಾರೆ.
ಐಪಿಎಲ್ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾನ್ಯತೆ ಪಡೆಯದ ಬೆಟ್ಟಿಂಗ್ ಆ್ಯಪ್ ಗಳನ್ನು ಪ್ರಚಾರ ಮಾಡುತ್ತಿದ್ದು, ಈ ಮೂಲಕ ಟಾಸ್ ಯಾರು ಗೆಲ್ಲುತ್ತಾರೆ, ಮ್ಯಾಚ್ ಯಾರು ವಿನ್ ಆಗುತ್ತಾರೆ, ಯಾವ ಆಟಗಾರ ಇವತ್ತು ಚೆನ್ನಾಗಿ ಆಡುತ್ತಾನೆ ಎಂಬಿತ್ಯಾದಿ ಪ್ರಿಡಿಕ್ಷನ್ ಮಾಡುವ ಬೆಟ್ಟಿಂಗ್ ಆ್ಯಪ್ ಗಳನ್ನು ಎನ್ನುವಂತಹ ಸ್ಟೋರಿಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
ಜನರು ಇಂತಹ ಬೆಟ್ಟಿಂಗ್ ಆಪ್ ಗಳ ಜಾಹೀರಾತುಗಳನ್ನು ನೋಡಿ ದಾರಿ ತಪ್ಪುತ್ತಿದ್ದು, ಇಂತಹ ಜಾಹಿರಾತುಗಳು ವಂಚಿಸುವ ಜಾಹೀರಾತು ಆಗಿವೆ ಎಂದು ವಕೀಲರೊಬ್ಬರು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದರು.
- Advertisement -