Friday, November 27, 2026
Homeಕರಾವಳಿಮಂಗಳೂರುಮಂಗಳೂರು; ತ್ರಿಬಲ್ ರೈಡಿಂಗ್ ವೇಳೆ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿಗಳು...

ಮಂಗಳೂರು; ತ್ರಿಬಲ್ ರೈಡಿಂಗ್ ವೇಳೆ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿಗಳು ಸಾವು

- Advertisement -
- Advertisement -

ಮಂಗಳೂರು; ತ್ರಿಬಲ್ ರೈಡಿಂಗ್ ವೇಳೆ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬೈಕ್ ಡಿಕ್ಕಿಯಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಕೆಪಿಟಿ ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಸಂಕೀರ್ತ್ (23) ಹಾಗೂ ಧನುರ್ವೇದ್ (19) ಮೃತರು. ಇನ್ನೊಬ್ಬ ವಿದ್ಯಾರ್ಥಿ ಸಿಬಿ ಸ್ಯಾಮ್ (22) ಗಾಯಗೊಂಡಿದ್ದಾರೆ. ಈ ಮೂರು ವಿದ್ಯಾರ್ಥಿಗಳು ಕೇರಳದವರು

ರಾಯಲ್ ಎನ್‌ಫೀಲ್ಡ್‌ ಬೈಕ್‌ನಲ್ಲಿ ಈ ಮೂವರು ವಿದ್ಯಾರ್ಥಿಗಳು ಕುಂಟಿಕಾನದಿಂದ ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದರು. ಯಾರೂ ಹೆಲ್ಕೆಟ್ ಧರಿಸಿರಲಿಲ್ಲ. ಅತಿವೇಗದಿಂದ ಸಾಗಿದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಸವಾರ ಸಂಕೀರ್ತ್ ಅವರ ತಲೆ ರಸ್ತೆ ವಿಭಜಕಕ್ಕೆ ಬಡಿದಿತ್ತು. ಸಹ ಸವಾರ ಧನುರ್ವೇದ್ ಅವರ ತಲೆ ಸಮೀಪದಲ್ಲಿದ್ದ ವಿದ್ಯುತ್ ಕಂಬಕ್ಕ ಡಿಕ್ಕಿ ಹೊಡೆದಿತ್ತು. ಇಬ್ಬರ ತಲೆಗೂ ಬಲವಾದ ಏಟು ಬಿದ್ದಿತ್ತು. ಗಾಯಗೊಂಡಿದ್ದ ಅವರನ್ನು ಅವರ ಹಿಂದೆ ಇನ್ನೊಂದು ಬೈಕಿನಲ್ಲಿ ಬರುತ್ತಿದ್ದ ಗೆಳೆಯರು ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರು ಅದಾಗಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!