
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಚ್ಚರಿಯ ಘಟನೆ ನಡೆದಿದೆ. ನಾಲ್ಕು ದಿನಗಳಿಂದ ಕಾಡಿನಲ್ಲಿ ಕಣ್ಮರೆಯಾಗಿದ್ದ 75 ವರ್ಷದ ವೃದ್ಧ ವೈದ್ಯನನ್ನು ಪೊಲೀಸ್ ಶ್ವಾನವೊಂದು ಹುಡುಕಿಕೊಟ್ಟಿದೆ.
ಕೊಪ್ಪ ತಾಲೂಕಿನ ಗುಬ್ಬುಗಡ್ಡೆ ಗ್ರಾಮದಿಂದ ವೈದ್ಯ 75 ವರ್ಷದ ವೆಂಕಟೇಗೌಡ ಅವರು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಾಕ್ ಮಾಡುತ್ತಿದ್ದ ಅವರು ಮನೆ ದಾರಿ ಮರೆತು ಕಾಡಿನಲ್ಲಿ ಹಾದಿಯಲ್ಲಿ ಸಾಗಿ ಮಿಸ್ ಆಗಿದ್ದರು. ನಾಲ್ಕು ದಿನಗಳಿಂದ ಹುಡುಕಾಡಿದ್ರೂ ಪತ್ತೆಯಾಗಿರಲಿಲ್ಲ. ವೆಂಕಟೇಗೌಡ ನೀರು ಕುಡಿದುಕೊಂಡು 4 ದಿನ ಕಾಡಲ್ಲೇ ಇದ್ದರು. ಮನೆಯರು ಪೊಲೀಸರಿಗೆದೂರು ಕೊಟ್ಟಿದ್ದರು.

ದೂರು ದಾಖಲಾಗುತ್ತಿದ್ದಂತೆ ವೆಂಕಟೇಗೌಡ ಅವರನ್ನು ಹುಡುಕಲು SP ವಿಕ್ರಂ ಅಮಟೆ ಡಾಗ್ squad ಬಳಕೆಗೆ ಸೂಚನೆ ನೀಡಿದ್ದರು. ಅದರಂತೆ ಕೊಪ್ಪ ಠಾಣೆ Inspector ಬಸವರಾಜ್ ತಂಡದಿಂದ ಕಾರ್ಯಾಚರಣೆ ನಡೆಯಿತು. ಈ ವೇಳೆ ವೆಂಕಟೇಗೌಡ ಅವರ ಪಂಚೆ ಸಿಕ್ಕಿದೆ. ಅದರ ಜಾಡು ಹಿಡಿದು ಹೊರಟಿದ್ದ ಶ್ವಾನ ಗುಣವಂತೆ ಎಂಬ ಪ್ರದೇಶದಲ್ಲಿ ಅವರನ್ನು ಪತ್ತೆ ಮಾಡಿದೆ. ಇದೀಗ ಶ್ವಾನದ ಚಾಲಾಕಿತನಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


