- Advertisement -
- Advertisement -
ಮಂಗಳೂರು: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದ ಬಂಧಿತ ಆರೋಪಿಗಳಾದ ಮುರುಗಂಡಿ ತೇವಾರ್ ಮತ್ತು ಜೋಶ್ವಾ ರಾಜೇಂದ್ರನ್ ಗೆ ಫೆ.3ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಇಬ್ಬರು ಬಂಧಿತ ದರೋಡೆಕೋರರನ್ನು ಇಂದು ಮಂಗಳೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಅವರನ್ನು ಫೆ.3ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಎಸಿಪಿ ಧನ್ಯಾ ನಾಯಕ್, ಸಿಸಿಬಿ ಪೊಲೀಸ್ ತಂಡದೊಂದಿಗೆ ಉಳ್ಳಾಲ ಪೊಲೀಸರು ಆರೋಪಿಗಳನ್ನು ಕೋರ್ಟ್ ಗೆ ಹಾಜರು ಪಡಿಸಿದ್ರು. ಈ ವೇಳೆ ಪೊಲೀಸ್ ಕಸ್ಟಡಿಗೆ ನೀಡಿ ಜಡ್ಜ್ ಆದೇಶ ನೀಡಿದ್ದಾರೆ.
- Advertisement -