- Advertisement -
- Advertisement -
ಮಂಗಳೂರು: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಸ್ಥಳೀಯರ ಕೈವಾಡ ಇರುವ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಶಾಸಕ ಭರತ್ ಶೆಟ್ಟಿ ಅವರ ಹೇಳಿಕೆ ಗೃಹ ಸಚಿವ ಡಾ ಜಿ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನ ಆರೋಪಿಗಳನ್ನು ಹಿಡಿದಿದ್ದೇವೆ. ರಿಕವರಿ ಕೂಡ ಮಾಡಿದ್ದೇವೆ.ಸ್ಥಳೀಯರ ಬೆಂಬಲ ಇದ್ರೆ ತನಿಖೆಯಲ್ಲಿ ಗೊತ್ತಾಗುತ್ತದೆ.ಶಾಸಕರಿಗೆ ಮೊದಲೇ ಮಾಹಿತಿ ಇದ್ದರೆ ಹೇಳಬಹುದಿತ್ತಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಸ್ಥಳೀಯರ ಸಹಕಾರ ಇದ್ದರೆ ತನಿಖೆಯಲ್ಲಿ ಗೊತ್ತಾಗುತ್ತದೆ. ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದಿದ್ದಾರೆ.
- Advertisement -