- Advertisement -
![]()
- Advertisement -
ಬೆಂಗಳೂರು : ಯೂಟ್ಯೂಬರ್ ಸಮೀರ್.ಎಮ್.ಡಿ ಬಂಧನಕ್ಕೆ ಬೆಂಗಳೂರಿನಲ್ಲಿರುವ ಅವರw ಮನೆಯನ್ನು ಧರ್ಮಸ್ಥಳ ಪೊಲೀಸರು ಸುತ್ತುವರೆದಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಸಂಬಂಧ ನೋಟಿಸ್ ನೀಡಿದ್ರೂ ಠಾಣೆಗೆ ವಿಚಾರಣೆಗೆ ಹಾಜರಾಗದ ಯೂಟ್ಯೂಬರ್ ಸಮೀರ್.ಎಮ್.ಡಿ ಬಂಧನ ಮಾಡಲು ವಾರೆಂಟ್ ಜೊತೆ ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನಂದ್.ಎಮ್ ನೇತೃತ್ವದ ತಂಡ ಬೆಂಗಳೂರಿನ ಬನ್ನೆರುಘಟ್ಟದಲ್ಲಿರುವ ಯೂಟ್ಯೂಬರ್ ಸಮೀರ್.ಎಮ್.ಡಿ ಬಾಡಿಗೆ ಮನೆಯನ್ನು ಆ.21 ರಂದು ಸುತ್ತುವರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಹೋರಾಟಗಾರ ಗಿರೀಶ್ ಮಟ್ಟಣ್ಣಣವರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿದ್ದಾರೆ.
ಇನ್ನು ಸಮೀರ್ ಅವರನ್ನು ಬಂಧಿಸಿ ಧರ್ಮಾಸ್ಥಳ ಠಾಣೆಗೆ ಕರೆ ತರಲಿದ್ದಾರೆ.
- Advertisement -


