Tuesday, May 14, 2024
Homeಕರಾವಳಿಬೆಳ್ತಂಗಡಿ: ಗೋ ಮಾಂಸ ಮಾಡುತ್ತಿದ್ದಾಗ ಪೊಲೀಸರ ದಾಳಿ; ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ: ಗೋ ಮಾಂಸ ಮಾಡುತ್ತಿದ್ದಾಗ ಪೊಲೀಸರ ದಾಳಿ; ಮೂವರು ಆರೋಪಿಗಳ ಬಂಧನ

spot_img
- Advertisement -
- Advertisement -

ಬೆಳ್ತಂಗಡಿ; ಗೋ ಮಾಂಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮೆನಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿರುವ ಘಟನೆ ಕುವೆಟ್ಟು ಗ್ರಾಮದ  ಅನಿಲ ಎಂಬಲ್ಲಿ  ನಡೆದಿದೆ. ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಹಮೀದ್, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದ ಕಸಿಗೆ ಬೈಲು ನಿವಾಸಿಗಳಾದ ಹ್ಯಾರೀಸ್ ಹಾಗೂ ಇಸ್ಮಾಯಿಲ್ ಬಂಧಿತ ಆರೋಪಿಗಳಪು.

 ಜನವರಿ 20 ರಂದು ಪೊಲೀಸರು  ರಾತ್ರಿ ಸುಮಾರು 11:45 ಗಂಟೆಗೆ ರೌಂಡ್ಸ್ ನಲ್ಲಿದ್ದಾಗ  ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಅನಿಲ ಎಂಬಲ್ಲಿ ಅಬ್ದುಲ್ ರಹಿಮಾನ್ ಎಂಬವರ ಮನೆಯ ಹಿಂಬದಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಅದರಂತೆ ದಾಳಿ ನಡೆಸಿದಾಗ  ಅಬ್ದುಲ ರಹಿಮಾನ್ ಎಂಬವರ ಮನೆಯ ಹಿಂಬದಿ ಆರೋಪಿಗಳಾದ ಹಮೀದ್ ,ಇಸ್ಮಾಯಿಲ್ ,ಮತ್ತು ಹ್ಯಾರಿಸ್ ಎಂಬವರುಗಳು ದನದ ಮಾಂಸವನ್ನು ಕತ್ತರಿಸುತ್ತಿದ್ದರು. ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ಒಟ್ಟು 13,750 ರೂಪಾಯಿ ಮೌಲ್ಯದ ದನದ ಮಾಂಸ ಹಾಗೂ ಗೋ ಮಾಂಸ ಮಾಡಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 4,5,7,8,12 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಮೂವರಿಗೂ ಜಾಮೀನು ಮಂಜೂರು ಮಾಡಿದೆ.

- Advertisement -
spot_img

Latest News

error: Content is protected !!