Wednesday, November 13, 2024
Homeಕರಾವಳಿನಾಳೆಯಿಂದ ಭಕ್ತರಿಲ್ಲದೇ ಸಾಂಕೇತಿಕವಾಗಿ ಪೊಳಲಿ ಜಾತ್ರೆ

ನಾಳೆಯಿಂದ ಭಕ್ತರಿಲ್ಲದೇ ಸಾಂಕೇತಿಕವಾಗಿ ಪೊಳಲಿ ಜಾತ್ರೆ

spot_img
- Advertisement -
- Advertisement -

ಬಂಟ್ವಾಳ: ಪ್ರತಿವರ್ಷ ಒಂದು ತಿಂಗಳ ಕಾಲ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯು ಈ ಬಾರಿ ಕೊರೊನಾ ವೈರಸ್ ಆತಂಕದ ಪರಿಣಾಮದಿಂದ ಬಹಳ ಸರಳವಾಗಿ ಶಾಸ್ತ್ರಕ್ಕೆ ಚ್ಯುತಿ ಬಾರದಂತೆ ನಡೆಯಲಿದ್ದು, ಎ. 6ರಂದು ಮೊದಲ ಚೆಂಡು ನಡೆಯಲಿದೆ. ಜಾತ್ರೆಯು ಕೇವಲ ದೇವಸ್ಥಾನದ ಸಿಬಂದಿ, ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆಯಲ್ಲಿದ್ದು, ಭಕ್ತರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ.

ಪ್ರತಿವರ್ಷ ಈ ಸಮಯದಲ್ಲಿ ಭಕ್ತರಿಂದ ತುಂಬಿರುತ್ತಿದ್ದ ಪೊಳಲಿ ಕ್ಷೇತ್ರಕ್ಕೆ ಈ ಬಾರಿ ಭಕ್ತರಿಗೆ ಪ್ರವೇಶವಿಲ್ಲ. ಹೊರ ಭಾಗದಲ್ಲೇ ನಿಂತು ದೇವರಿಗೆ ಕೈ ಮುಗಿದು ತೆರಳಬೇಕಿದೆ. ಎ. 6ರಿಂದ 5 ದಿನಗಳ ಕಾಲ ಚೆಂಡು ನಡೆಯಲಿದ್ದು, ಎ. 11ರಂದು ನಡೆಯಬೇಕಿದ್ದ ಮಹಾರಥೋತ್ಸವ ಕೂಡ ಇರುವುದಿಲ್ಲ. ಈಗಾಗಲೇ ಕ್ಷೇತ್ರದ ಆಡಳಿತ ಮಂಡಳಿ, ಪುರೋಹಿತ ವರ್ಗ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಸರಳ ರೀತಿಯ ಜಾತ್ರೆ ನಡೆಸುವ ನಿರ್ಧಾರಕ್ಕೆ ಬಂದಿದೆ.

ಕೊರೊನಾ ವೈರಸ್ ಆತಂಕದಿಂದ ಸರಕಾರದ ಆದೇಶದಂತೆ ಸರಳ ರೀತಿಯಲ್ಲಿ ಕೇವಲ ದೇವಸ್ಥಾನದ ಸಿಬಂದಿ, ಆಡಳಿತ ಮಂಡಳಿಯ ಪ್ರಮುಖರ ಉಪಸ್ಥಿತಿಯಲ್ಲಿ ಜಾತ್ರೆ ನಡೆಯಲಿದೆ. ಶಾಸ್ತ್ರಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಪ್ರತಿಯೊಂದು ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುವುದಕ್ಕೆ ದೇವರಲ್ಲಿ ಪ್ರಾರ್ಥಿಸಿ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿಗಳು ತಿಳಿಸಿದ್ದಾರೆ

- Advertisement -
spot_img

Latest News

error: Content is protected !!