- Advertisement -
- Advertisement -
ಕಾರವಾರ ಏ 05: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 113ನೇ ಜನ್ಮದಿನಾಚರಣೆಯನ್ನು ಲಾಕ್ ಡೌನ್ ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಕೆ. ಅವರು ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಕೆ, ಡಾ.ಬಾಬು ಜಗಜೀವನ ರಾಂ ಅವರು ಜನರೊಂದಿಗೆ ಇದ್ದು ದಲಿತೋದ್ಧಾರಕ್ಕೆ ಹೋರಾಡಿದವರು. ದೇಶದ ಅಭ್ಯುದಯದ ಜತೆಗೆ ಶೋಷಿತರ ಅಭಿವೃದ್ಧಿಯ ಕನಸು ಕಂಡವರು. ನಾವು ಶೈಕ್ಷಣಿಕವಾಗಿ ಎಷ್ಟೇ ಮುಂದುವರಿದಿದ್ದರೂ ದೊಡ್ಡವರ ಬದುಕು ನಮಗೆ ದಾರಿ ದೀಪವಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್. ಪುರುಸೋತ್ತಮ ಸೇರಿದಂತೆ ಆಯ್ದ ಕೆಲವು ಗಣ್ಯರು ಭಾಗವಹಿಸಿದ್ದರು.
- Advertisement -