ಬಂಟ್ವಾಳ : ಮಡಂತ್ಯಾರು ಸೇವಸಹಕಾರಿ ಬ್ಯಾಂಕ್ (ನಿ.) ಇದರ ಸಿಬ್ಬಂದಿಯೋರ್ವರು ಕರ್ತವ್ಯ ಮುಗಿಸಿ ವಾಪಾಸು ಆಗುತ್ತಿದ್ದ ವೇಳೆ ಪುಂಜಾಲಕಟ್ಟೆ ಪೋಲೀಸರು ತಡೆದಿದ್ದರು ಎಂಬ ಕಾರಣಕ್ಕಾಗಿ ಪಡಿತರ ಯೂನಿಯನ್ ಸಂಘ ನೀಡಿದ ಕರೆಯಂತೆ ಬೆಳ್ತಂಗಡಿ ತಾಲೂಕಿನ್ಯದ್ಯಂತ ಪಡಿತರ ಸಾಮಾಗ್ರಿಗಳನ್ನು ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ , ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ , ಪುಂಜಾಲಕಟ್ಟೆ ಎಸ್. ಐ.ಸೌಮ್ಯ, ಯೂನಿಯನ್ ಅಧ್ಯಕ್ಷ ಸತೀಶ್ ಶೆಟ್ಟಿ, ಪ್ರಮುಖರಾದ ರಹಮಾನ್ ಪಡ್ಪು, ಜೋಯೆಲ್ ಮೆಂಡೋನ್ಸ್, ಬ್ಯಾಂಕ್ ಮ್ಯಾನೇಜರ್ ಅರವಿಂದ ಉಪಸ್ಥಿತಿ ಯಲ್ಲಿ ಮಾತುಕತೆ ನಡೆದು ಬಳಿಕ ಪ್ರಕರಣ ಸುಖಾಂತ್ಯ ನಡೆಯಿತು.
ಪುಂಜಾಲಕಟ್ಟೆ ಠಾಣಾ ಪೋಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬ್ಯಾಂಕ್ ಸಿಬ್ಬಂದಿ ಐಡಿ ಕಾರ್ಡ್ ಹಾಕದೆ ಹೆಲ್ಮಟ್ ಧರಿಸದೆ ಸಂಚಾರ ಮಾಡುತ್ತಿದ್ದ ವೇಳೆ ಪೋಲೀಸರು ತಡೆದಿದ್ದರು ಎಂದು ತಿಳಿದು ಬಂದಿದೆ. ಇದೀಗ ಈ ಪ್ರಕರಣ ಪೋಲೀಸರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯ ಗೊಂಡಿದೆ.