Thursday, April 25, 2024
Homeಕರಾವಳಿಪುತ್ತೂರು: ಶಾಸಕ ಸಂಜೀವ ಮಠಂದೂರುರಿಂದ ಎಪಿಎಂಸಿಯಲ್ಲಿ ಅಕ್ಕಿ-ಹಾಲು ವಿತರಣೆ

ಪುತ್ತೂರು: ಶಾಸಕ ಸಂಜೀವ ಮಠಂದೂರುರಿಂದ ಎಪಿಎಂಸಿಯಲ್ಲಿ ಅಕ್ಕಿ-ಹಾಲು ವಿತರಣೆ

spot_img
- Advertisement -
- Advertisement -

ಪುತ್ತೂರು : ಲಾಕ್​ಡೌನ್​ ಹಿನ್ನೆಲೆ ಪುತ್ತೂರು ಎಪಿಎಂಸಿ ವತಿಯಿಂದ ಬಡವರಿಗೆ ಅಕ್ಕಿ-ಹಾಲು ವಿತರಣೆ ಮಾಡಲಾಯಿತು. ಈ ಮಹತ್ ಕಾರ್ಯಕ್ಕೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು. ಪುತ್ತೂರು ನಗರಸಭೆಯಲ್ಲಿ 51 ಪೌರಕಾರ್ಮಿಕರು ದುಡಿಯುತ್ತಿದ್ದಾರೆ. ಇದರಲ್ಲಿ ಹೊರ ಜಿಲ್ಲೆಯವರೂ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಅವರು ತಮ್ಮ ತವರಿಗೆ ಹೋಗದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಕೆಎಂಎಫ್​​ನಿಂದ ನೀಡಲಾದ 500 ಲೀಟರ್ ಹಾಲು ಮತ್ತು ದಿನಸಿ ವಿತರಿಸಲಾಯಿತು.

ಕೊರೋನಾ (ಕೋವಿಡ್-19) ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ಕೊರೋನ ಭೀತಿಯ…

Posted by Sanjeeva Matandoor on Saturday, 4 April 2020

ಮಂಗಳೂರಿನ ಪ್ರಕಾಶ್ ಶೆಟ್ಟಿ ಬಂಜಾರ ಅವರು ನೀಡಿದ ದಿನಸಿ ಪದಾರ್ಥಗಳುಳ್ಳ ಕಿಟ್​​ಗಳನ್ನು ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್, ತಾಲೂಕು ಪಂಚಾಯತ್ ಸ್ಥಾಯಿ ಅಧ್ಯಕ್ಷರಾದ ಶ್ರೀ ಸಾಜ ರಾಧಾಕೃಷ್ಣ ಆಳ್ವ, ಭಾರತೀಯ ಜನತಾ ಪಾರ್ಟಿ ಮಾಜಿ ಮಂಡಲ ಅಧ್ಯಕ್ಷರಾದ ಶ್ರೀ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭಾ ಸದಸ್ಯರಾದ ಶ್ರೀ ಜೀವಂಧರ್ ಜೈನ್, ಶ್ರೀ ಜಗನ್ನೀವಾಸ ರಾವ್, ಎ.ಪಿ.ಎಂ.ಸಿ ಅಧ್ಯಕ್ಷರಾದ ಶ್ರೀ ದಿನೇಶ್ ಮೆದು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಬೂಡಿಯಾರ್ ರಾಧಾಕೃಷ್ಣ ರೈ, ಕೆ.ಎಂ.ಎಫ್. ನಿರ್ದೇಶಕರುಗಳಾದ ಶ್ರೀ ನಾರಾಯಣ ಪ್ರಕಾಶ್, ಶ್ರೀ ಜಯರಾಮ ರೈ ಬಳಜ್ಜ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ ಮುಂಗ್ಲಿಮನೆ, ಶ್ರೀಮತಿ ಜಯಶ್ರೀ ಶೆಟ್ಟಿ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!