- Advertisement -
- Advertisement -
ಬಂಟ್ವಾಳ ತಾಲೂಕಿನಲ್ಲಿ ಹರಿಯುವ ಪಲ್ಗುಣಿ ನದಿಗೆ ಮೊಮ್ಮಗನೊಂದಿಗೆ ಸ್ನಾನಕ್ಕಿಳಿದ ವೃದ್ಧ ಕಾಲು ಜಾರಿ ಬಿದ್ದು ಮೃತ ಪಟ್ಟಿರುವ ಘಟನೆ ಬಂಡಸಾಲೆ ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಅರಳ ಗ್ರಾಮದ ತಡ್ಯಾಳ ನಿವಾಸಿ ತಿಮ್ಮಪ್ಪ ಪೂಜಾರಿ (70) ಎಂದು ಗುರುತಿಸಲಾಗಿದೆ.
ಇವರು ಮೊಮ್ಮಗ ನಿತಿನ್ ಜೊತೆ ಬಂಡಶಾಲೆ ಪಲ್ಗುಣಿ ನದಿಗೆ ಬೆಳಿಗ್ಗೆ ಸ್ನಾನಕ್ಕೆಂದು ಹೋಗಿದ್ದರು. ನೀರಿಗಿಳಿದ ಕೂಡಲೇ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದಾರೆ. ಮನೆಯವರು ಸ್ಥಳಕ್ಕೆ ಅಗಮಿಸಿ ಸ್ಥಳೀಯ ಈಜುಗಾರರ ಮೂಲಕ ನದಿಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -