- Advertisement -
![]()
- Advertisement -
ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 2.45ಕ್ಕೆ ಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ನ್ಯಾಯಮೂರ್ತಿ ಗಂಗಾಧರಪ್ಪ ಚೆನ್ನಬಸಪ್ಪ ಹಡಪದ ತೀರ್ಪು ಪ್ರಕಟಿಸಲಿದ್ದಾರೆ. ಸ್ವಾಮೀಜಿ ವಿರುದ್ಧದ ಮೊದಲ ಪೋಕ್ಸೋ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದ್ದು, ಮುರುಘಾಶ್ರೀಗೆ ಜೈಲೋ ಅಥವಾ ಜಾಮೀನೋ ಎಂಬುದು ಇಂದು ಮಧ್ಯಾಹ್ನ ಕೋರ್ಟ್ ಆದೇಶ ಹೊರಡಿಸಲಿದೆ.
ಎ1 ಮುರುಘಾ ಶರಣರು, ಎ2 ವಾರ್ಡನ್ ರಶ್ಮಿ, ಎ5 ಮಠದ ಮ್ಯಾನೇಜರ್ ಪರಮಶಿವಯ್ಯ ಇಂದು ಕೋರ್ಟ್‌ಗೆ ಹಾಜರಾಗಿದ್ದು, ಆರೋಪಿತರಲ್ಲಿ ಎ3 ಬಸವಾದಿತ್ಯ ಹಾಗೂ ಎ5 ವಕೀಲ ಗಂಗಾಧರಯ್ಯ ಅವರನ್ನು ಚಾರ್ಜ್‌ಶೀಟ್‌ನಿಂದ ಕೈಬಿಡಲಾಗಿದೆ.
- Advertisement -


