Tuesday, July 1, 2025
Homeತಾಜಾ ಸುದ್ದಿಕೊರೊನ ಬಿಕ್ಕಟ್ಟನ್ನು ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಒಂದು ಅವಕಾಶವನ್ನಾಗಿ ಬದಲಾಯಿಸಬೇಕು : ಪ್ರಧಾನಿ ನರೇಂದ್ರ...

ಕೊರೊನ ಬಿಕ್ಕಟ್ಟನ್ನು ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಒಂದು ಅವಕಾಶವನ್ನಾಗಿ ಬದಲಾಯಿಸಬೇಕು : ಪ್ರಧಾನಿ ನರೇಂದ್ರ ಮೋದಿ

spot_img
- Advertisement -
- Advertisement -

ನವದೆಹಲಿ : ಇಂದು ಇಡೀ ವಿಶ್ವವೇ ಮಾರಕ ಕೊರೊನ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಇದರ ಜೊತೆಗೆ ನಾವು ಪ್ರವಾಹ, ಬೆಳೆಗಳ ಮೇಲೆ ಮಿಡತೆಗಳ ಹಾವಳಿ, ಆಲಿಕಲ್ಲು ಮಳೆ, ತೈಲ ಬಾವಿಯಲ್ಲಿ ಬೆಂಕಿ, ಸಣ್ಣ ಭೂಕಂಪಗಳು, ಚಂಡಮಾರುತಗಳು ಇವೆಲ್ಲಾ ಕಾಣಿಸಿಕೊಂಡಿದ್ದು ಇಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ವಾಣಿಜ್ಯ ಮಂಡಳಿ 95ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಜೊತೆಗೆ ಬೇರೆ ಬೇರೆ ಸಂಕಷ್ಟಗಳು ಎದುರಾಗುತ್ತಿವೆ. ಅಗ್ನಿ ಅವಘಡ, ಭೂಕಂಪ, ಚಂಡಮಾರುತಗಳು ಸರದಿಯಾಗಿ ಬರುತ್ತಿವೆ. ಇದೆಲ್ಲದರ ವಿರುದ್ದ ನಾವು ಒಂದಾಗಿ ಹೋರಾಟ ನಡೆಸುತ್ತಿದ್ದೇವೆ. ಸಮಯ ನಮ್ಮನ್ನು ಪರೀಕ್ಷೆ ಮಾಡುತ್ತಿದೆ. ಎಲ್ಲ‌ ಸಂಕಷ್ಟಗಳು ಒಮ್ಮಲೇ ಬರುವ ಮೂಲಕ ನಮ್ಮನ್ನು ಪರೀಕ್ಷಿಸುತ್ತಿದೆ. ಆದರೆ ಇದು ಮುಂದೆ ಒಳ್ಳೆ ಭವಿಷ್ಯವನ್ನು ತಂದುಕೊಡಲಿದೆ. ಈ ಸಂಕಷ್ಟವನ್ನು ಬದಲಾವಣೆಯ ಹಂತವಾಗಿ ಪರಿವರ್ತಿಸಿಕೊಳ್ಳಬೇಕು. ಆತ್ಮ ನಿರ್ಭಾರ್ ಭಾರತ ಮೂಲಕ ಈ ಸಂಕಷ್ಟ ಕಾಲ ದೇಶಕ್ಕೆ ಬದಲಾವಣೆಯ ಘಟ್ಟ ಆಗಬೇಕು ಎಂದು ಕರೆ ನೀಡಿದರು.
ಸರ್ಕಾರ ಹಲವು ಹಂತಗಳಲ್ಲಿ ದೇಶವನ್ನು ಸ್ವಾವಲಂಬಿಯತ್ತ ಸಾಗಿಸುತ್ತಿದೆ. 4-5 ವರ್ಷಗಳಿಂದ ಸ್ವಾವಲಂಬಿ ಸಾಧಿಸಲು ಪ್ರಯತ್ನ ಮಾಡುತ್ತಿದ್ದೇವೆ. ಕೊರೋನಾ ಸಂಕಷ್ಟ ಕಾಲ ಆತ್ಮ ನಿರ್ಭಾರ್ ಭಾರತ್ ಅದಕ್ಕೆ ಹೆಚ್ವು ವೇಗ ನೀಡಿದೆ. ಕುಟುಂಬಗಳಲ್ಲಿ ಮಕ್ಕಳಿಗೆ 20 ವರ್ಷ ಆಗುತ್ತಿದ್ದಂತೆ ಸ್ವಂತ ಕಾಲ ಮೇಲೆ ನಿಲ್ಲಲು ಹೇಳುತ್ತೇವೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಲಹೆ ನೀಡುತ್ತೇವೆ. ಭಾರತವೂ ಸಹ ತನ್ನ ಕಾಲ ಮೇಲೆ ನಿಲ್ಲಬೇಕಿದೆ. ಹೀಗಾಗಿ ಸಾಧ್ಯವಾದಷ್ಟು ಸ್ವಾವಲಂಬಿಯಾಗಬೇಕು. ರಫ್ತು ಮಾಡುವಷ್ಟು ಹಂತಕ್ಕೆ ಬೆಳೆಯಬೇಕು. ಆಗ ಸಣ್ಣ ಸಣ್ಣ ದೇಶಿ ವಸ್ತುಗಳ ಖರೀದಿಯಿಂದ ವ್ಯಾಪಾರಸ್ಥರ ಶ್ರಮವನ್ನು ನಾವು ಗೌರವಿಸದಂತಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

- Advertisement -
spot_img

Latest News

error: Content is protected !!