Wednesday, May 15, 2024
Homeತಾಜಾ ಸುದ್ದಿಶಬರಿಮಲೆ ದೇವಸ್ಥಾನ ಪುನರಾರಂಭಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನ ತಂತ್ರಿ

ಶಬರಿಮಲೆ ದೇವಸ್ಥಾನ ಪುನರಾರಂಭಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನ ತಂತ್ರಿ

spot_img
- Advertisement -
- Advertisement -

ತಿರುವನಂತಪುರ: ಮಾರಕ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೂನ್ 14 ರಿಂದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಭಕ್ತರ ಪ್ರವೇಶಕ್ಕೆ ಪ್ರಧಾನ ತಂತ್ರಿ (ಮುಖ್ಯ ಅರ್ಚಕ) ಬುಧವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧ ಶ್ರೀ ಶಬರಿಮಲೆ ದೇವಸ್ಥಾನಕ್ಕೆ ಜೂನ್‌ 14ರಿಂದ ಭಕ್ತರಿಗೆ ಪ್ರವೇಶ ನೀಡುವುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿತ್ತು . ಆದರೆ, ಸರ್ಕಾರದ ಈ ತೀರ್ಮಾನವನ್ನು ದೇವಸ್ಥಾನದ ಪ್ರಧಾನ ತಂತ್ರಿ (ಮುಖ್ಯ ಅರ್ಚಕ) ವಿರೋಧಿಸಿದ್ದು,ತಿರುವಾಂಕೂರು ದೇವಸ್ವಂ ಮಂಡಳಿಗೆ ಪತ್ರ ಬರೆದು ಮುಖ್ಯ ತಂತ್ರಿ ಕಂದರಾರು ಮಹೇಶ್ ಮೋಹನಾರು‌ ‘ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೇವಸ್ಥಾನ ತೆರೆಯುವ ಪ‍್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ತಿರುವಾಂಕೂರು ದೇವಸ್ವಂ ಮಂಡಳಿ ಅರ್ಚಕರು ಹಾಗೂ ದೇವಸ್ಥಾನದ ಇತರ ಪ್ರತಿನಿಧಿಗಳ ಸಭೆ ಕರೆದಿದೆ.

ಮಂಗಳವಾರದಿಂದ ಸಾರ್ವಜನಿಕರಿಗೆ ಪೂಜಾ ಕೇಂದ್ರಗಳಿಗೆ ಅವಕಾಶ ನೀಡುವ ಕೇರಳ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿರುವ ಬಿಜೆಪಿ, ತಂತ್ರಿಯ ಬೇಡಿಕೆಯನ್ನು ಬಲವಾಗಿ ಬೆಂಬಲಿಸುತ್ತಿದ್ದರೆ, ತಂತ್ರಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅಲ್ಲಿಗೆ ಶಬರಿಮಲೆ ವಿಚಾರದಲ್ಲಿ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಮೇಲಾಟ ಪ್ರಾರಂಭಿಸಿದ

- Advertisement -
spot_img

Latest News

error: Content is protected !!