ಪುತ್ತೂರು: ತಾಲೂಕಿನ ಮಾಜಿ ಶಾಸಕ ಮತ್ತು ಬಿಜೆಪಿ ಪಕ್ಷದ ಹಿರಿಯ ನೇತಾರ ಉರಿಮಜಲು ರಾಮ್ ಭಟ್ ಗೆ ಪ್ರಧಾನಿ ನರೇಂದ್ರ ಮೋದಿಯವರು ಫೋನ್ ಮಾಡಿ ರಾಮ್ ಭಟ್ ರ ಕ್ಷೇಮ ವಿಚಾರಿಸಿದ್ದಾರೆ.
ಇಂದು ಬೆಳಿಗ್ಗೆ ರಾಮ್ ಭಟ್ ಮನೆಯಲ್ಲಿ ಇದ್ದಾಗ ಒಂದು ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಬಂದಿದೆ. ಆ ಬದಿಯಿಂದ ಹಿಂದಿಯಲ್ಲಿ ಮಾತನಾಡಿದ ಆ ವ್ಯಕ್ತಿ, ನೀವು ಈಗ ಫ್ರೀ ಇದ್ದೀರಾ ? ನಿಮ್ಮ ಬಳಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತನಾಡಬೇಕಂತೆ ಎಂದು ಹೇಳಿದ್ದಾರೆ.
ಒಂದು ಕ್ಷಣ ಗಾಬರಿಯಾದರೂ, ನಂತರ ಪ್ರಧಾನಿ ನರೇಂದ್ರ ಮೋದಿ ರಾಮ್ ಭಟ್ ಅವರ ಬಳಿ ಮಾತನಾಡಿದ್ದಾರೆ.
ಯಾವುದೇ ಮುನ್ಸೂಚನೆ ನೀಡದೆ ಕರೆ ಮಾಡಿದ್ದ ಪ್ರಧಾನಿ, ಕೆಲ ಹೊತ್ತು ರಾಮ್ ಭಟ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ರಾಜಕೀಯ ರಹಿತವಾದ ಸಂಭಾಷಣೆ ಇದಾಗಿದ್ದು, ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರನ್ನು ಪ್ರಧಾನಿ ಮೋದಿ ನೆನಪಿಸಿರುವುದು ನಿಜಕ್ಕೂ ಶ್ಲಾಘನೀಯ. ಇದು ಬಿಜೆಪಿ ಪಕ್ಷದ ವಿಶೇಷತೆ ಎಂದು ರಾಮ್ ಭಟ್ ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ.