- Advertisement -
- Advertisement -
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇ 2 ರಿಂದ ಮೂರು ದಿನಗಳವರೆಗೆ ಈ ವರ್ಷದ ಮೊದಲ ವಿದೇಶ ಪ್ರವಾಸ ಕೈಗೊಳ್ಳಲಿದ್ದು, ಇಡೀ ಪ್ರವಾಸದಲ್ಲಿ ವಿರಾಮವಿಲ್ಲದಂತೆ ಮಾತುಕತೆಗಳನ್ನು ನಡೆಸಲಿದ್ದಾರೆ.
8 ವಿಶ್ವನಾಯಕರೊಂದಿಗೆ 65 ತಾಸು ಕಾಲ 25 ಮಹತ್ವಪೂರ್ಣ ಮಾತುಕತೆ ನಡೆಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ಶನಿವಾರ ಮಾಹಿತಿ ನೀಡಿವೆ.
ಮೋದಿ ಅವರು ಜರ್ಮನಿ, ಡೆನ್ಮಾರ್ಕ್ ಹಾಗೂ ಫ್ರಾನ್ಸ್ ಯಾತ್ರೆ ಕೈಗೊಳ್ಳಲಿದ್ದಾರೆ.
ಅವರು ಈ ವೇಳೆ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಸಭೆಯಲ್ಲಿ ವಿಶ್ವದ 7 ದೇಶಗಳ 8 ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ವಿಶ್ವದ ಸುಮಾರು 50 ಉದ್ಯಮಿಗಳೊಡನೆ ಈ ವೇಳೆ ಸಂವಾದ ನಡೆಸಲಿದ್ದಾರೆ ಎಂದು ಅವು ತಿಳಿಸಿವೆ.
- Advertisement -