Wednesday, July 22, 2026
Homeಕರಾವಳಿಮಂಗಳೂರು ಹೊರವಲಯದಲ್ಲಿ ಟೈರ್ ಸ್ಫೋಟಗೊಂಡು ಸೇತುವೆ ಮೇಲೆ ಪಲ್ಟಿಯಾದ ಮೀನು ತುಂಬಿದ್ದ ಪಿಕಪ್

ಮಂಗಳೂರು ಹೊರವಲಯದಲ್ಲಿ ಟೈರ್ ಸ್ಫೋಟಗೊಂಡು ಸೇತುವೆ ಮೇಲೆ ಪಲ್ಟಿಯಾದ ಮೀನು ತುಂಬಿದ್ದ ಪಿಕಪ್

- Advertisement -
- Advertisement -

ಮಂಗಳೂರು: ಟೈರ್ ಸ್ಫೋಟಗೊಂಡು ಮೀನು ಸಾಗಾಟದ ಮಾಡುತ್ತಿದ್ದ ಪಿಕಪ್ ವಾಹನ ಪಲ್ಟಿಯಾದ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಮಲ್ಪೆ ಬಂದರಿನಿಂದ ಉಳ್ಳಾಲದ ಫಿಶ್ ಆಯಿಲ್ ಮಿಲ್ ಗೆ ಮೀನು ಸಾಗಾಟ ಮಾಡುತ್ತಿದ್ದ ವೇಳೆ ಉಳ್ಳಾಲದ ನೇತ್ರಾವತಿ ಸೇತುವೆ ಮೇಲೆ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಪಿಕಪ್ ಪಲ್ಟಿಯಾಗಿದೆ.

ವಾಹನ ಪಲ್ಟಿಯಾದ ಕಾರಣ ಸೇತುವೆ ಮೇಲೆ ಮೀನು ಚೆಲ್ಲಿದ ಹಿನ್ನೆಲೆಯಲ್ಲಿ ಕೆಲವು ಹೊತ್ತು ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಪಿಕಪ್ ವಾಹನ ಚಾಲಕ ಯಾವುದೇ ಪ್ರಾಣಾಪಾಯ ಇಲ್ಲದೇ ಪಾರಾಗಿದ್ದು, ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

- Advertisement -

Latest News

error: Content is protected !!