Saturday, June 6, 2026
Homeಕರಾವಳಿಮಂಗಳೂರು; ಸ್ಕೂಟರ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು

ಮಂಗಳೂರು; ಸ್ಕೂಟರ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು

- Advertisement -
- Advertisement -

ಮಂಗಳೂರು; ಸ್ಕೂಟರ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.ಇಲ್ಲಿನ : ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕೆರೆಬೈಲು‌ ಬಳಿ ಸ್ಕೂಟರ್ ನಿಂದ ಬಿದ್ದು ಕಾಸರಗೋಡು ಮಧೂರು ನಿವಾಸಿ ಸುಮಾ ನಾರಾಯಣ ಗಟ್ಟಿ ( 52) ಗಂಭೀರ  ಗಾಯಗೊಂಡಿದ್ದ‌ರು. ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೂಲತ: ಬಂಟ್ವಾಳ ನೆಟ್ಲದವರಾಗಿದ್ದ ಇವರು ಸೆ.24ರ ಭಾನುವಾರ ಕುಟುಂಬದ ಮನೆ ಪಿಲಾರು ಅರಮನೆಯಲ್ಲಿ‌ನಡೆದ ಪೂಜೆಯಲ್ಲಿ ಪಾಲ್ಗೊಂಡು ಸಂಜೆ ಕಾಸರಗೋಡು ಕಡೆ ತೆರಳಲು ಸಹೋದರನ ಬೈಕ್ ನಲ್ಲಿ ತೊಕ್ಕೊಟ್ಟು ಜಂಕ್ಷನ್ ಗೆ ಹೋಗುತ್ತಿದ್ದರು. ಈ‌ ನಡುವೆ ಜಪ್ಪಿನಮೊಗರು ಬಳಿಯ ಸಂಬಂಧಿಕರ ಮನೆಗೆ ತೆರಳಿ ಬಳಿಕ ಬೀರಿಗೆ ಬಂದು ಅಲ್ಲಿಂದ ಕಾಸರಗೋಡು ಕಡೆ ತೆರಳಲು ಹೆದ್ದಾರಿಯಲ್ಲಿ ತೊಕ್ಕೊಟ್ಟು ಪ್ಲೈಓವರ್ ಬಳಿ ತಲುಪುತ್ತಿದ್ದಂತೆ ಕೆರೆಬೈಲು ನಾಗನ ಕಟ್ಟೆ ಬಳಿ ಸ್ಕೂಟರ್ ನಿಂದ ಕೆಳಗೆ ಉರುಳಿ ಬಿದ್ದಿದ್ದಾರೆ. ಈ ಪರಿಣಾಮ ತಲೆಗೆ ಗಂಭೀರ ಗಾಯಗೊಂಡಿದ್ದ ಸುಮಾ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೃತರು ಪತಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!