Sunday, April 28, 2024
Homeಕರಾವಳಿಕರಾವಳಿಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ಸ್ಯಾಟ್ ಲೈಟ್ ಫೋನ್ ಟ್ರೇಸಿಂಗ್ ವಿಚಾರ

ಕರಾವಳಿಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ಸ್ಯಾಟ್ ಲೈಟ್ ಫೋನ್ ಟ್ರೇಸಿಂಗ್ ವಿಚಾರ

spot_img
- Advertisement -
- Advertisement -

ಮಂಗಳೂರು: ಕರಾವಳಿ ಭಾಗದಲ್ಲಿ ಕಳೆದ 6 ತಿಂಗಳಿಂದ ಸೈಲೆಂಟಾಗಿದ್ದ ಸ್ಯಾಟ್​ಲೈಟ್​ ಫೋನ್​ಗಳು ಈಗ ಮತ್ತೆ ಆಯಕ್ಟಿವ್​ ಆಗಿವೆ. ದಕ್ಷಿಣ ಕನ್ನಡದ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್​ ಟ್ರೇಸ್​ ಆಗಿದ್ದು, ಈ ವಿಚಾರ ಆತಂಕ ಮೂಡಿಸಿದೆ.

ಕಳೆದ 10 ದಿನಗಳಲ್ಲಿ 3 ಬಾರಿ ಸ್ಯಾಟ್​ಲೈಟ್ ಫೋನ್​ ಬಳಕೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್​ ಲಭ್ಯವಾಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಗುಪ್ತಚರ ಏಜೆನ್ಸಿ RAW ಸ್ಯಾಟಲೈಟ್ ಫೋನ್ ಲೊಕೇಷನ್ ಟ್ರೇಸ್ ಮಾಡುತ್ತಿದೆ.

ತುರಾಯಾ ಸ್ಯಾಟಲೈಟ್ ಫೋನ್ ಬಳಕೆ ಆಗಿದೆ. ನಿಗೂಢ ವ್ಯಕ್ತಿಗಳೊಂದಿಗೆ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಲಾಗಿದೆ. ಈ ಬೆಳವಣಿಗೆಯಿಂದ ಸೈಲೆಂಟ್ ಆಗಿದ್ದ ಸ್ಲೀಪರ್ ಸೆಲ್​ಗಳು ಮತ್ತೆ ಆಕ್ಟಿವ್ ಆಗಿದ್ದಾರೆಯೇ ಎನ್ನುವ ಶಂಕೆಯನ್ನು ಇದು ಮೂಡಿಸಿದೆ.

ಸ್ಯಾಟಲೈಟ್​ ಫೋನ್​ಗಳ ನಡುವೆ ನಡೆವ ಸಂವಾದ ಟ್ರೇಸ್​ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಸ್ಯಾಟಲೈಟ್​ ಫೋನ್​ಗಳು ಉಗ್ರ ಚಟುವಟಿಕೆಗೆ ಹೆಚ್ಚು ಬಳಕೆ ಆಗುತ್ತದೆ. ಭಾರತದಲ್ಲಿ ಇದರ ಬಳಕೆಗೆ ಅವಕಾಶವಿಲ್ಲ. ಕೆಲವೊಮ್ಮೆ ವಿದೇಶಿ ಪ್ರವಾಸಿಗರು ಸ್ಯಾಟಲೈಟ್​ ಫೋನ್​ ಬಳಕೆ ಮಾಡಿರುವ ಸಾಧ್ಯತೆಯೂ ಇರುತ್ತದೆ.

- Advertisement -
spot_img

Latest News

error: Content is protected !!