Friday, April 19, 2024
Homeತಾಜಾ ಸುದ್ದಿಲಿಫ್ಟ್ ನಲ್ಲಿ ಝೊಮ್ಯಾಟೋ ಡೆಲಿವರಿ ಬಾಯ್ ಯ ಖಾಸಗಿ ಅಂಗಕ್ಕೆ ಕಚ್ಚಿದ ನಾಯಿ; ಸೋಷಿಯಲ್...

ಲಿಫ್ಟ್ ನಲ್ಲಿ ಝೊಮ್ಯಾಟೋ ಡೆಲಿವರಿ ಬಾಯ್ ಯ ಖಾಸಗಿ ಅಂಗಕ್ಕೆ ಕಚ್ಚಿದ ನಾಯಿ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ; ನಾಯಿ ಮಾಲೀಕನ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಗರಂ

spot_img
- Advertisement -
- Advertisement -

ಮುಂಬೈ; ಫುಡ್ ಡೆಲಿವರಿ ಮಾಡಲು ಬಂದ ಝೊಮ್ಯಾಟೋ ಡೆಲಿವರಿ ಬಾಯ್ ಗೆ ಲಿಫ್ಟ್ ನಲ್ಲಿ ನಾಯಿಯೊಂದು ಖಾಸಗಿ ಅಂಗಕ್ಕೆ ಕಚ್ಚಿದ ಘಟನೆ ನವಿ ಮುಂಬೈನ ಪನ್ವೇಲ್ ನಲ್ಲಿ ನಡೆದಿದೆ.

ತನ್ನ ಸಾಕು ನಾಯಿಯೊಂದಿಗೆ ಒಬ್ಬ ವ್ಯಕ್ತಿ ಲಿಫ್ಟ್ ಏರುತ್ತಾನೆ. ಈ ವೇಳೆ ಅದೇ ಲಿಫ್ಟ್ ನಲ್ಲಿ ಝೊಮ್ಯಾಟೋ ಡೆಲಿವರಿ ಬಾಯ್ ಕೂಡ ಇದ್ದ. ಇದ್ದಕ್ಕಿದ್ದಂತೆ  ಡೆಲಿವರಿ ಬಾಯ್‌ ಮೇಲೆ ಎಗರಿದ ನಾಯಿ, ಆತನ ಖಾಸಗಿ ಅಂಗಕ್ಕೆ ಕಚ್ಚಿದೆ.

ಝೊಮ್ಯಾಟೋ ಡೆಲಿವರಿ ಬಾಯ್‌ ಗೆ ಲಿಪ್ಟ್ ನಲ್ಲಿ ಖಾಸಗಿ ಭಾಗಕ್ಕೆ ನಾಯಿ‌ ಕಚ್ಚುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೆ ನಾಯಿಯ ಮಾಲೀಕನ ಮೇಲೆ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಝೊ ಮ್ಯಾಟೋ ಉದ್ಯೋಗಿಯು ನಾಯಿಯಿಂದ ರಕ್ಷಿಸಿಕೊಳ್ಳಲು‌ ನಾಯಿಯನ್ನು ದೂರ ತಳ್ಳುವುದು, ಆತ ರಕ್ತದಿಂದ ತೀವ್ರ ನೋವಿನಿಂದ ಬಳಲುತ್ತಿರುವುದನ್ನ ಕಾಣಬಹುದು.ನಾಯಿಯು ಡೆಲಿವರಿ ವ್ಯಕ್ತಿಯನ್ನು ತೀವ್ರವಾಗಿ ಗಾಯಗೊಳಿಸಿದ್ದು,ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.

- Advertisement -
spot_img

Latest News

error: Content is protected !!