Friday, June 5, 2026
Homeಕರಾವಳಿಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ರೈಲಿನಲ್ಲಿ ಯುವಕನ ಹುಚ್ಚಾಟ

ಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ರೈಲಿನಲ್ಲಿ ಯುವಕನ ಹುಚ್ಚಾಟ

- Advertisement -
- Advertisement -

ಹುಬ್ಬಳ್ಳಿ: ಚಲಿಸುತ್ತಿರುವ ರೈಲಿನಲ್ಲಿ ಯುವಕನೊಬ್ಬ ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ.‌

ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ರೈಲಿನ ಬಾಗಿಲಿನಲ್ಲಿ ನಿಂತು ವಿಚಿತ್ರವಾಗಿ ಯುವಕ ವರ್ತನೆ ತೋರಿದ್ದಾನೆ.

ಕೈಗೆ ಸಿಗುತ್ತಿದ್ದ ಗಿಡಗಳ ಎಲೆಗಳನ್ನು ಹರಿಯುವುದು, ಕಬ್ಬಿಣದ ಕಂಬಗಳನ್ನು ಮುಟ್ಟುವುದು, ರೈಲಿನ ಬಾಗಿಲು ಹಿಡಿದು ಜೋಕಾಲಿ ಆಡುವುದು ಹೀಗೆ ಸುಮಾರು ಹೊತ್ತು ಯುವಕ ಹುಡುಗಾಟ ನಡೆಸಿದ್ದಾನೆ.

ರೈಲು ಸಾಕಷ್ಟು ವೇಗವಾಗಿ ಚಲಿಸುತ್ತಿದ್ದು, ಮಾರ್ಗದ ಮಧ್ಯೆ ಸಾಕಷ್ಟು ಪ್ರಪಾತಗಳು ಇದ್ದರೂ ಅಪಾಯ ಲೆಕ್ಕಿಸದೇ ಯುವಕ ಹುಚ್ಚಾಟ ತೋರಿದ್ದಾನೆ.

ಯುವಕನ ಹುಚ್ಚಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!