Friday, June 5, 2026
Homeಕರಾವಳಿಉಜಿರೆ ವಿದ್ಯಾರ್ಥಿಗಳ ನಡುವೆ ಗಲಾಟೆ ಪ್ರಕರಣ: ಇತ್ತಂಡಗಳ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಉಜಿರೆ ವಿದ್ಯಾರ್ಥಿಗಳ ನಡುವೆ ಗಲಾಟೆ ಪ್ರಕರಣ: ಇತ್ತಂಡಗಳ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ಉಜಿರೆಯಲ್ಲಿ ಶನಿವಾರ ಸಂಜೆ ನಡೆದ ವಿದ್ಯಾರ್ಥಿಗಳ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ತಂಡಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ನೀಡಿರುವ ಆಟೋ ಚಾಲಕ ಪ್ರಜ್ವಲ್.ಕೆ.ವಿ, ನಿನ್ನೆ ಸಂಜೆ 06.45ರ ವೇಳೆಗೆ ಉಜಿರೆಯಿಂದ ಮನೆಗೆ ಹೋಗುತ್ತಿರುವಾಗ ಉಜಿರೆ ಸಿದ್ದವನ ತಲುಪಿದಾಗ ಅಜಿತ್ ನಗರ ಎಂಬಲ್ಲಿ ಜನರು ಸೇರಿರುವುದನ್ನು ನೋಡಿ ಅಲ್ಲಿಗೆ ಹೋದಾಗ ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಒಂದು ತಂಡ ಹಾಗೂ ಪ್ರಜ್ವಲ್ ಅವರಿಗೆ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾದ ಶಾಂತಯ್ಯ ಹಾಗೂ ಆಟೋ ಚಾಲಕ ಜಗದೀಶ್ ಎಂಬವರಿಗೆ ಹಲ್ಲೆ ಮಾಡುವುದನ್ನು ಗಮನಿಸಿ ವಿಚಾರಿಸಲು ಹೋದಾಗ ವಿದ್ಯಾರ್ಥಿಗಳಾದ ಶಶಾಂಕ್,ಸುಜನ್,ಚಂದನ್,ಪ್ರಜ್ವಲ್ ಮತ್ತು ಇತರ ನಾಲ್ಕೈದು ಮಂದಿ ಪ್ರಜ್ವಲ್ ಅವರಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಪ್ರಜ್ವಲ್ ತಿಳಿಸಿದ್ದಾರೆ ಅದರಂತೆ ಬೆಳ್ತಂಗಡಿ ಪೊಲೀಸರು143,147,323,504,506 ಜೊತೆಗೆ 149 ಐಪಿಸಿಯಲ್ಲಿ ದೂರು ದಾಖಲಾಗಿದೆ.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೊಂದು ತಂಡದ ವಿದ್ಯಾರ್ಥಿ ಶಶಾಂಕ್.ಬಿ.ಶೆಟ್ಟಿ ದೂರು ದಾಖಲಿಸಿದ್ದು, ನಿನ್ನೆ ಸಂಜೆ 06.30ರ ವೇಳಗೆ ಎಸ್ ಡಿ ಎಮ್ ಕಾಲೇಜ್ ಮೈದಾನದಲ್ಲಿ ಆಟ ಆಡಿ ಗೆಳೆಯರಾದ ಸುಜನ್, ಚಂದನ್ ,ಪ್ರಜ್ವಲ್ ಎಂಬವರೊಂದಿಗೆ ಉಜಿರೆಯ ಎಸ್ ಡಿ ಎಮ್ ಕಾಲೇಜಿನ ಎದುರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಿಗೋ ಜಗಳವಾಗುತ್ತಿದ್ದು ಆರೋಪಿಗಳಾದ ಪ್ರಜ್ವಲ್.ಕೆ.ವಿ ಮತ್ತು ಸುಮಾರು 7-8 ಜನರು ಏನೋ ತಪ್ಪು ತಿಳಿದು ಹಲ್ಲೆ ಮಾಡುವ ಉದ್ದೇಶದಿಂದದ ನನಗೆ ಹಾಗೂ ನನ್ನ ಸ್ನೇಹಿತರಾದ ಚಂದನ್, ಸುಜನ್ ಪ್ರಜ್ವಲ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕ್ರಿಕೆಟ್ ವಿಕೆಟ್ ಹಾಗೂ ಇತರೆ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಶಾಂಕ್ ತಾನು ನೀಡಿದ ದೂರಿನಂತೆ ಕಲಂ 143,147,148,323,324,504,506 ಜೊತೆಗೆ 149 ಐಪಿಸಿ ಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡೂ ತಂಡದವರ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಖಾಸಗಿ ಕಾಲೇಜ್ ವಿದ್ಯಾರ್ಥಿ ಶಶಾಂಕ್.ಬಿ. ಶೆಟ್ಟಿಗೆ ವಿಕೆಟ್ ನಿಂದ ಹಲ್ಲೆ ಮಾಡಿರುವುದರಿಂದ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!