Thursday, June 4, 2026
Homeಕರಾವಳಿಉಡುಪಿಉಡುಪಿ: ಗುಂಡಿಕ್ಕಿ ಯುವಕನ ಹತ್ಯೆ; ಪಟಾಕಿ ಎಂದು ಭಾವಿಸಿ ಸುಮ್ಮನಾಗಿದ್ದ ಪಕ್ಕದ ಮನೆಯವರು!

ಉಡುಪಿ: ಗುಂಡಿಕ್ಕಿ ಯುವಕನ ಹತ್ಯೆ; ಪಟಾಕಿ ಎಂದು ಭಾವಿಸಿ ಸುಮ್ಮನಾಗಿದ್ದ ಪಕ್ಕದ ಮನೆಯವರು!

- Advertisement -
- Advertisement -

ಉಡುಪಿ: ಯುವಕನೊಬ್ಬನನ್ನು ಬಂದೂಕಿನಿಂದ ಶೂಟ್ ಮಾಡಿ ಹತ್ಯೆ ಮಾಡಿರುವ ಘಟನೆ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ಸಂಭವಿಸಿದೆ.ಕೃಷ್ಣ (36) ಹತ್ಯೆಗೊಳಗಾಗಿದ್ದ ಯುವಕನಾಗಿದ್ದು, ನಿನ್ನೆ ರಾತ್ರಿ ನಡೆದಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ 9.30 ರ ವೇಳೆಗೆ ಗುಂಡಿನ ಶಬ್ದ ಕೇಳಿ ಬಂದಿದ್ದು, ಪಟಾಕಿಯ ಶಬ್ದ‌ ಎಂದು ಭಾವಿಸಿ ಪಕ್ಕದ ಮನೆಯವರು ಸುಮ್ಮನಾಗಿದ್ದರು ಎನ್ನಲಾಗಿದೆ.

ಮೃತ ಕೃಷ್ಣ ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದು, ಏಕಾಂಗಿಯಾಗಿ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ‌ ಊಟ ಮಾಡುತ್ತಿದ್ದ ವೇಳೆಯಲ್ಲಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,‌ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!