Friday, June 5, 2026
Homeಕರಾವಳಿಉಡುಪಿಉಡುಪಿಯಲ್ಲಿ ಮಾನವೀಯತೆ ಮರೆತ ಜನ: ಅಪಘಾತವಾಗಿ ಗಾಯಗೊಂಡು ವ್ಯಕ್ತಿ ನರಳುತ್ತಿದ್ದರೂ ಸಹಾಯಕ್ಕೆ ಬಾರದ ಜನ: ಆಸ್ಪತ್ರೆಗೆ...

ಉಡುಪಿಯಲ್ಲಿ ಮಾನವೀಯತೆ ಮರೆತ ಜನ: ಅಪಘಾತವಾಗಿ ಗಾಯಗೊಂಡು ವ್ಯಕ್ತಿ ನರಳುತ್ತಿದ್ದರೂ ಸಹಾಯಕ್ಕೆ ಬಾರದ ಜನ: ಆಸ್ಪತ್ರೆಗೆ ಸಾಗಿಸೋ ವೇಳೆ ಯುವಕ ಸಾವು

- Advertisement -
- Advertisement -

ಉಡುಪಿ :ಅಪಘಾತದಲ್ಲಿ ಗಾಯಗೊಂಡು ವ್ಯಕ್ತಿ ನರಳುತ್ತಿದ್ದರೂ ಕೂಡ ಜನರು ಸಹಾಯಕ್ಕೆ ಬಾರದೇ ಮಾನವೀಯತೆ ಮರೆತಂತೆ ವರ್ತಿಸಿದ ಘಟನೆ ಉಡುಪಿಯ ಕಟಪಾಡಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡು ಗಾಯಾಳು ಆಸ್ಪತ್ರೆಗೆ ಸೇರಿಸುವಂತೆ ಗೋಗರೆದರೂ ಒಬ್ಬರು ಕೂಡ ಸಹಾಯಕ್ಕೆ ಬಂದಿಲ್ಲ. ಬದಲಾಗಿ ಮೂಕ ಪ್ರೇಕ್ಷಕರಾಗಿ ನಿಂತು ನೋಡಿದ್ದಾರೆ.

ತನ್ನ ಗೆಳೆಯರ ಜೊತೆ ಕ್ಯಾಟರಿಂಗ್ ಕೆಲಸಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಯುವಕ ಸುಶಿಕ್ಷಿತ್ (20)ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದನು. ಸಹಾಯ ಮಾಡುವಂತೆ ಆಸ್ಪತ್ರೆ ಧಾವಿಸುವಂತೆ ಅಂಗಲಾಚಿದರೂ ಕೂಡ ಯಾರೂ ನೆರವಿಗೆ ಧಾವಿಸಲಿಲ್ಲ.

ರಿಕ್ಷಾ ಆದರೂ ಕರೆತನ್ನಿ ಎಂದು ಗಾಯಾಳು ಪರಿ ಪರಿಯಾಗಿ ಬೇಡಿದರೂ ಕೂಡ ಒಬ್ಬರು ಕೂಡ ಸಹಾಯಕ್ಕೆ ಬರಲಿಲ್ಲ, ಕೊನೆಗೆ ಆತನ ಗೆಳೆಯರು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡಿದ್ದಾರೆ . ಆದರೆ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ. ಗೆಳೆಯರ ಆಕ್ರಂದನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!