Wednesday, April 16, 2025
Homeತಾಜಾ ಸುದ್ದಿವಿಟ್ಲ: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಅಮೈ ಮಹಾಲಿಂಗ ನಾಯ್ಕರ ಮನೆಗೆ ಪೇಜಾವರ ಶ್ರೀ ಭೇಟಿ

ವಿಟ್ಲ: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಅಮೈ ಮಹಾಲಿಂಗ ನಾಯ್ಕರ ಮನೆಗೆ ಪೇಜಾವರ ಶ್ರೀ ಭೇಟಿ

spot_img
- Advertisement -
- Advertisement -

ವಿಟ್ಲ: ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಅಮೈ ಮಹಾಲಿಂಗ ನಾಯ್ಕ, ಅವರ ಮನೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಭೇಟಿ ನೀಡಿದ್ದಾರೆ.

ಮೊದಲು ತಮ್ಮ ಮನೆಗೆ ಆಗಮಿಸಿದ ಶ್ರೀಗಳನ್ನು ಗೌರವದಿಂದ ಬರಮಾಡಿಕೊಂಡ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಅವರು, ಶ್ರೀಗಳ ಜೊತೆ ಭಗೀರಥ ಯತ್ನದಿಂದ ಕೊರೆದ ಸುರಂಗದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಸುರಂಗದ ಒಳಹೊಕ್ಕ ಶ್ರೀಗಳು ಅದ್ಭುತ ಪ್ರಯತ್ನವನ್ನು ಕಂಡು ವಿಸ್ಮಯಗೊಂಡರು. ನಾಯ್ಕರು ಕುಟುಂಬ ಸಮೇತ ಗೌರವಾರ್ಪಣೆ ಸಲ್ಲಿಸಿದರು.

ನಂತರ ಮಹಾಲಿಂಗ ನಾಯ್ಕರಿಗೆ ಶಾಲು, ಶ್ರೀಕೃಷ್ಣನ ವಿಗ್ರವಿರುವ ಕಾವ್ಯ ಮಂಟಪದ ಸ್ಮರಣಿಕೆ, ಫಲ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವದಿಸಿದರು.

ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಇವರು ಭೇಟಿ ನೀಡಿದರು. ಈ ಸಂದರ್ಭ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಹರಿಕೃಷ್ಣ ಬಂಟ್ವಾಳ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!