Thursday, June 4, 2026
Homeಕರಾವಳಿಉಡುಪಿರಾಮ ನವಮಿ ವೇಳೆ ಅಯೋಧ್ಯೆಗೆ ಬರಬೇಡಿ; ಭಕ್ತರಿಗೆ ಪೇಜಾವರ ಶ್ರೀ ಮನವಿ

ರಾಮ ನವಮಿ ವೇಳೆ ಅಯೋಧ್ಯೆಗೆ ಬರಬೇಡಿ; ಭಕ್ತರಿಗೆ ಪೇಜಾವರ ಶ್ರೀ ಮನವಿ

- Advertisement -
- Advertisement -

ವಿಜಯಪುರ: ರಾಮನವಮಿ ಹಬ್ಬದ ವೇಳೆ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಬರಬೇಡಿ ಎಂದು ಭಕ್ತರಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ.

ವಿಜಯಪುರದ ಕೃಷ್ಣ ಮಠದಲ್ಲಿ ಮಾತನಾಡಿದ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಟ್ರಸ್ಟಿಯೂ ಆಗಿರುವ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ತಮ್ಮ ತಮ್ಮ ಊರುಗಳಲ್ಲೇ ರಾಮ ನವಮಿ ಆಚರಿಸುವಂತೆ ಹೇಳಿದ್ದಾರೆ.

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿ ನಿತ್ಯ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಿದ್ದು, ರಾಮನವಮಿಗೆ ಇನ್ನಷ್ಟು ಭಕ್ತರು ಆಗಮಿಸಿದಲ್ಲಿ ತೊಂದರೆ ಉಂಟಾಗಲಿದೆ ಎಂದು ತಿಳಿಸಿರುವ ಪೇಜಾವರ ಶ್ರೀ, ತಮ್ಮ ಊರಿನ ಮಂದಿರ, ಮನೆಗಳಲ್ಲೇ ರಾಮ ನವಮಿ ಆಚರಿಸಿ ಎಂದು ಸಲಹೆ ಮಾಡಿದ್ದಾರೆ.

- Advertisement -

Latest News

error: Content is protected !!