Thursday, June 4, 2026
Homeಕರಾವಳಿಉಡುಪಿನಾಡಿನಾದ್ಯಂತ ದಶಕೋಟಿ ರಾಮ ಜಪ ಯಜ್ಞಕ್ಕೆ ಪೇಜಾವರ ಶ್ರೀ ಕರೆ

ನಾಡಿನಾದ್ಯಂತ ದಶಕೋಟಿ ರಾಮ ಜಪ ಯಜ್ಞಕ್ಕೆ ಪೇಜಾವರ ಶ್ರೀ ಕರೆ

- Advertisement -
- Advertisement -

ಉಡುಪಿ: ಅಧಿಕ ಮಾಸದಲ್ಲಿ ಆಯೋಧ್ಯಾ ಶ್ರೀರಾಮನ ಕೃಪೆಗಾಗಿ ಸಂಕಲ್ಪ ಮಾಡಿ ಜುಲೈ 17 ರಿಂದ ನಾಡಿನಾದ್ಯಂತ ದಶ ಕೋಟಿ ರಾಮ ಜಪಯಜ್ಞಕ್ಕೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.

ನಾಳೆಯಿಂದ ಒಂದು ತಿಂಗಳ ಕಾಲ ಅಧಿಕ ಶ್ರಾವಣ ಮಾಸ ಇರಲಿದ್ದು, ಈ ಸಂದರ್ಭದಲ್ಲಿ ದೇವತಾ ಪ್ರೀತ್ಯರ್ಥವಾಗಿ ಮಾಡುವ ಯಾವುದೇ ಸತ್ಕರ್ಮಗಳಿಗೆ ಅತ್ಯಧಿಕ ಫಲ ದೊರೆಯಲಿದೆ ಎಂದು ಪೇಜಾವರ ಶ್ರೀ ಹೇಳಿದ್ದಾರೆ.

ಅಲ್ಲದೇ, ಪುರುಷೋತ್ತಮ ಮಾಸವೆಂದೇ ಕರೆಯಲ್ಪಡುವ ಈ ಅಧಿಕ ಮಾಸದಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಮಕ್ಕಳು, ಯುವಕರು, ಯುವತಿಯರು, ಮಹಿಳೆಯರು, ಪುರುಷರು ಮತ್ತು ವೃದ್ಧರು ಶುದ್ಧ ಮನಸ್ಸಿನಿಂದ ಕನಿಷ್ಠ ಹತ್ತು ನಿಮಿಷಗಳ ಕಾಲ ಜಪಮಾಡಿ ಎಂದು ಪೇಜಾವರ ಸ್ವಾಮೀಜಿ ಕರೆ ನೀಡಿದ್ದಾರೆ.

ಕನಿಷ್ಠ ಮೂರರಿಂದ ಐದು ದಿನಗಳ ಕಾಲ ಎಲ್ಲರೂ ಒಂದೆಡೆ ಸೇರಿ ಸರಳ ಮತ್ತು ಸುಲಭ ರೀತಿಯಲ್ಲಿ ರಾಮಜಪ ನಡೆಸಬೇಕು, ಶ್ರೀರಾಮನಲ್ಲಿ ಇಡೀ ಲೋಕದಲ್ಲಿ ಶಾಂತಿ ಸುಭಿಕ್ಷೆ, ಸಮೃದ್ಧಿ ಸಕಲ ಜೀವರಾಶಿಗಳಿಗೆ ಶ್ರೇಯಸ್ಸು ಲಭಿಸುವಂತೆ ಪ್ರಾರ್ಥನೆ ಮಾಡಿ ಎಂದು ತಿಳಿಸಿರುವ ಪೇಜಾವರ ಶ್ರೀ, ಅಯೋಧ್ಯೆಯಲ್ಲಿ ಶತಶತಮಾನಗಳ ಕನಸೊಂದು ನನಸಾಗಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ, 2024 ಜನವರಿ ಅಂತ್ಯದ ವೇಳೆಗೆ ನೂತನ ಮಂದಿರದಲ್ಲಿ ಶ್ರೀ ಸೀತಾ ರಾಮಚಂದ್ರನ ಪ್ರತಿಷ್ಠಾಪನೆಯೂ ನೆರವೇರಲಿದೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!