Friday, June 5, 2026
Homeಕರಾವಳಿಬೆಳ್ತಂಗಡಿಯಲ್ಲೂ ಕಂಡು ಬಂತು ಪೇ ಸಿಎಂ ಪೋಸ್ಟರ್

ಬೆಳ್ತಂಗಡಿಯಲ್ಲೂ ಕಂಡು ಬಂತು ಪೇ ಸಿಎಂ ಪೋಸ್ಟರ್

- Advertisement -
- Advertisement -

ಬೆಂಗಳೂರು;  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ‘PAYCM’ ಕ್ಯೂಆರ್ ಕೋಡ್ ಪೋಸ್ಟರ್ ಬೆಳ್ತಂಗಡಿ ಪೇಟೆಯಲ್ಲೂ ಪ್ರತ್ಯಕ್ಷವಾಗಿದೆ.

ಬೆಳ್ತಂಗಡಿಯ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು, ಸಂತೆಕಟ್ಟೆ ಬಸ್ ನಿಲ್ದಾಣದಲ್ಲಿ, ಚರ್ಚ್ ರೋಡಿನ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಇಂತಹ ಪೋಸ್ಟರ್ ಗಳು ಕಂಡು ಬಂದಿದ್ದವು.

ಇನ್ನು  ಪೋಸ್ಟರ್ ಗಳನ್ನು ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು,  ಅದು ಎಲ್ಲೆಡೆ ವೈರಲ್ ಆಗಿತ್ತು.   ಶುಕ್ರವಾರ ರಾತ್ರಿ PAYCM ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಆದರೆ ಇಂದು ಬೆಳಗ್ಗಿನ ವೇಳೆ ಈ ಪೋಸ್ಟರ್ ಗಳೆಲ್ಲವೂ ಮಾಯವಾಗಿದೆ.

- Advertisement -

Latest News

error: Content is protected !!