Thursday, June 27, 2024
Homeತಾಜಾ ಸುದ್ದಿಜೈಲು ಹಕ್ಕಿಯಾದ ಪವಿತ್ರಗೌಡ; ಪರಪ್ಪನ ಅಗ್ರಹಾರದಲ್ಲಿ ಸುರಸುಂದರಿ ಈಗ ಕೈದಿ ನಂಬರ್ 6024

ಜೈಲು ಹಕ್ಕಿಯಾದ ಪವಿತ್ರಗೌಡ; ಪರಪ್ಪನ ಅಗ್ರಹಾರದಲ್ಲಿ ಸುರಸುಂದರಿ ಈಗ ಕೈದಿ ನಂಬರ್ 6024

spot_img
- Advertisement -
- Advertisement -

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣಪದ 13 ಆರೋಪಿಗಳ ಪೊಲೀಸ್ ಕಸ್ಟಡಿ ನಿನ್ನೆಗೆ ಅಂತ್ಯವಾದ ಹಿನ್ನೆಲೆ ಪೊಲೀಸರು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ರು. ಈ ವೇಳೆ ದರ್ಶನ್ ಸೇರಿದಂತೆ 5 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶವನ್ನು ಹೊರಡಿಸಿದ್ರೆ  ಎ1 ಆರೋಪಿ ಪವಿತ್ರ ಗೌಡ ಸೇರಿದಂತೆ ಉಳಿದ 7 ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿತ್ತು. ಅದರಂತೆ ನಿನ್ನೆ 13 ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಯಿತು. ಅಲ್ಲಿ ಪವಿತ್ರ ಗೌಡಗೆ ಡಿ ಬ್ಯಾರಕ್ ನನ್ನು ನೀಡಲಾಗಿದೆ.

ಅಲ್ಲದೇ ಪವಿತ್ರ ಗೌಡಗೆ ಕೈದಿ ನಂಬರ್ 6024 ನ್ನು ಜೈಲು ಅಧಿಕಾರಿಗಳು ನೀಡಿದ್ದಾರೆ. ಇನ್ನು ಪವಿತ್ರ ರಾತ್ರಿಯಿಡಿ ಊಟ ನಿದ್ದೆ ಮಾಡದೇ ಸಮಯ ಕಳೆದಿದ್ದಾರೆ ಎನ್ನಲಾಗಿದೆ. ಇತ್ತ ಪೊಲೀಸರ ಕಸ್ಟಡಿಯಲ್ಲಿರುವ ದರ್ಶನ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!