
ಬೆಂಗಳೂರು : ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಅವರನ್ನು ನಿನ್ನೆ ಕೋರ್ಟ್ ಗೆ ಹಾಜರುಪಡಿಸಿದ ವೇಳೆ ಮತ್ತೆ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿತ್ತು. ಅದರ ಬೆನ್ನಲ್ಲೇ ದರ್ಶನ್ ಪರ ವಾದ ಮಂಡಿಸಲು ಹಿರಿಯ ವಕೀಲ ಸಿ.ವಿ. ನಾಗೇಶ್ ಅವರನ್ನು ನೇಮಕ ಮಾಡಲಾಗಿದೆ.
ಸಿ ವಿ ನಾಗೇಶ್ ಅವರು ಖ್ಯಾತ ವಕೀಲರು. ಅವರು ಯಾವುದೇ ಕೇಸ್ ತೆಗೆದುಕೊಂಡರು ಆ ಕೇಸ್ ಸೋಲೋದಿಲ್ಲ ಅನ್ನೋ ಮಾತಿದೆ. ಮೊನ್ನೆ ದರ್ಶನ್ ಅವರ ಪರ ವಕಾಲತ್ತು ವಹಿಸಲು ಕೇಳಿಕೊಳ್ಳಲು ನಾಗೇಶ್ ಅವರನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ್ ಭೇಟಿ ಮಾಡಿದ್ದರು. ಅದರ ಬೆನ್ನಲ್ಲೇ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ.
ಇನ್ನು ನಟ ದರ್ಶನ್ ಜಾಮೀನು ಪಡೆಯಲು ಅರ್ಜಿ ಸಲ್ಲಿಸಲು ವಕೀಲ ರಾಘವೇಂದ್ರ ಅವರು ಸಿದ್ದತೆ ನಡೆಸಿದ್ದು, ಈ ನಡುವೆ ಕೋರ್ಟ್ ನಲ್ಲಿ ದರ್ಶನ್ ಪರ ವಾದ ಮಂಡಿಸಲು ಹಿರಿಯ ವಕೀಲ ಸಿ.ವಿ.ನಾಗೇಶ್ ಅವರನ್ನು ನೇಮಕ ಮಾಡಲಾಗಿದೆ.ವಕೀಲ ರಾಘವೇಂದ್ರ ಅವರು ನಾಗೇಶ್ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.


