Friday, June 5, 2026
Homeಕರಾವಳಿಉಡುಪಿಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಬಾತ್ ರೂಂನಲ್ಲಿ ಬಿದ್ದು ರೋಗಿ ಸಾವು

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಬಾತ್ ರೂಂನಲ್ಲಿ ಬಿದ್ದು ರೋಗಿ ಸಾವು

- Advertisement -
- Advertisement -

ಉಡುಪಿ ಜಿಲ್ಲಾಸ್ಪತ್ರೆಯ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಸುರೇಶ ರಾಮಗೊಂಡ (36)ಮೃತ ದುರ್ದೈವಿ..

ಉಡುಪಿಯ ಎಸ್.ಎಸ್.ರೆಸಿಡೆನ್ಸ್ ಹೋಟೇಲ್‌ನಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡಿಕೊಂಡಿದ್ದ ಅವರನ್ನು ಜ್ವರದ ಹಿನ್ನೆಲೆ ಆ.24ರಂದು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆಯಲ್ಲಿರುವ ವೇಳೆ ಅವರು ಆಸ್ಪತ್ರೆಯ ಬಾತ್‌ರೂಮಿನಲ್ಲಿ ಬಿದ್ದ ರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!